ಲೇಖಕ ಕೆ.ವಿ. ಸುಬ್ಬಣ್ಣ ಅವರು ಶೇಕ್ಸ್‌ಪಿಯರ್‌ನ ʼತೈಮೊನ್ ಆಫ್ ಅಥೆನ್ಸ್ʼ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ಧಾರೆ. ನಾಟಕವು ಹಣ ಹಾಗೂ ಅದು ಜನರನ್ನು ಹೇಗೆಲ್ಲಾ ಆಟವಾಡಿಸುತ್ತದೆ ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಇಲ್ಲಿ ಹಣವೇ ಪಾತ್ರಧಾರಿಗಳನ್ನು ಕುಣಿಸುವುದು ವಿಶೇಷವಾಗಿದೆ. ಶೇಕ್ಸ್‌ಪಿಯರ್ ನಾಟಕವನ್ನು ಬರೆದ ಸಮಯದಲ್ಲೇ ಇಂಗ್ಲೆಂಡಿನಲ್ಲಿ ಎಲಿಜಬೆತ್ ರಾಣಿಯ ಆಳ್ವಿಕೆ ಮುಗಿದು ಹೊಸ ಉತ್ತರಾಧಿಕಾರಿ ಅಧಿಕಾರಕ್ಕೆ ಬಂದಿದ್ದ. ಆದರೆ ಆತನ ಐಷಾರಾಮಿ ಜೀವನ ಹಾಗೂ ಅಂತಸ್ತು ಆತನಲ್ಲಿ ಹಳದಿ ಲೋಹದ ಮೇಲೆ ಅತಿಯಾದ ವ್ಯಾಮೋಹ ಹುಟ್ಟಲು ಕಾರಣವಾಯಿತು. ಇದು ಶೇಕ್ಸ್‌ಪಿಯರ್ ನಾಟಕದಲ್ಲಿ ಕಥಾವಿಷಯವಾಗಿರುವುದನ್ನು ಕಾಣಬಹುದು. ಕಾರ್ಲ್ ಮಾರ್ಕ್ಸ್, ತನ್ನ ‘ಕ್ಯಾಪಿಟಲ್’ ಗ್ರಂಥದಲ್ತ ‘ಹಳದಿ ಲೋಹ’ದ ಬಗ್ಗೆ ಶೇಕ್‍ಸ್ಪಿಯರನ ನಾಟಕದ ಮಾತುಗಳನ್ನು ಸೂಚಿಸಿದ್ದಾನೆ.
©2024 Book Brahma Private Limited.