ಖ್ಯಾತ ಮರಾಠಿ ನಾಟಕಕಾರ ವಿಜಯ ತೆಂಡೂಲ್ಕರ್ ಅವರ ಮರಾಠಿ ನಾಟಕದ ಕನ್ನಡ ಅನುವಾದ. ಈ ಅನುವಾದದ ಕುರಿತು ಎಂ. ವಿ. ನಾರಾಯಣರಾವ್ ಅವರು ’ಮುದ್ದಾದ “ಅಂಜಿ” ಕನ್ನಡದ್ದೇ ಮೂಲ ಕೃತಿಯೇನೋ ಅನ್ನುವಷ್ಟು ಚೆನ್ನಾಗಿ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಕಲಾವಿದೆ ಯಮುನಾ ಮೂರ್ತಿ ಅವರು ’ತಮ್ಮದೇ ಸರಸ ಸಲ್ಲಾಪದಲ್ಲಿ ಮುಳುಗಿದ ತಂದೆ-ತಾಯಿ, ಅಡ್ಡ ಹಾದಿಗೆ ಎಳೆಯಲು ಮತ್ತೆ ಮತ್ತೆ ಪ್ರಯತ್ನಿ ಸುತ್ತಿರುವ ಸಹೋದ್ಯೋಗಿ ಪ್ರಭುಣೆ, ಕಬಳಿಸಲು ಕಾತರ ರಾಗಿರುವ ಮುದುಕರು ಮತ್ತು ಯುವಕರನ್ನೊಳಗೊಂಡ ಸಮಾಜ, ಇವುಗಳ ಮಧ್ಯೆ ಒಬ್ಬಂಟಿಗಳಾಗಿ ವರಾನ್ವೇಷಣೆ ಯಲ್ಲಿ ತೊಡಗಿದ ಯುವತಿ ಅಂಜಿಯ ಅಸಹಾಯಕತೆ ಈ ನಾಟಕದ ವಸ್ತು ಪ್ರದರ್ಶನಕ್ಕೆ ಸಾಮಗ್ರಿ ಒದಗಿಸುವ ಒಳ್ಳೆಯ ನಾಟಕ. . ವಿಜಯ ತೆಂಡುಲಕರರ ಮೂಲ ಮರಾಠಿ ನಾಟಕವನ್ನು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿರುವ ಶೈಲಿ ಕನ್ನಡವೇ ಮೂಲವಾಗಿರಬಹುದು ಎಂಬಷ್ಟು ಸರಳ, ಸಹಜ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿರ್ದೇಶಕ ಸಂಪಿಗೆ ತೋಂಟದಾರ್ಯ ಅವರು ’ನೀಚ ಸ್ವಾರ್ಥ, ಲಾಲಸೆಗಳಿಂದ ತುಂಬಿದ ಭ್ರಷ್ಟ ಗೃಢ ಸಮಾಜ ಹೆಣೆದ ಮೋಸದ ಸಂಪ್ರದಾಯ, ನೀತಿ ನಿಯಮಗಳ
ಜಾಲಕ್ಕೆ ಸಿಲುಕಿದ ಸಭ್ಯ ತರುಣಿಯೊಬ್ಬಳ ದುರಂತ ಜೀವನ ಚಿತ್ರಣ ’ಅಂಜಿ’ ಎಂದು ವಿವರಿಸಿದ್ದಾರೆ.
©2024 Book Brahma Private Limited.