ಅಗ್ನಿಲೋಕ

Author : ವಸಂತ ಬನ್ನಾಡಿ

Pages 54

₹ 30.00




Published by: ತಿಂಗಳ ಬೆಳಕು ಪ್ರಕಾಶನ
Address: ಕುಂದಾಪುರ (ಜಿಲ್ಲೆ: ಉಡುಪಿ)

Synopsys

`ಅಗ್ನಿಲೋಕ’ ಕೃತಿಯು  ಜಪಾನಿನ ಅಕಿರಾ ಕುರಸೋವಾ ಅವರ ಸಿನೆಮಾ `ರಾನ್‘ನ ಆಧಾರಿತ ನಾಟಕವಾಗಿದ್ದು, ವಸಂತ ಬನ್ನಾಡಿ ಅವರು ಕನ್ನಡಕ್ಕೆ ರೂಪಾಂತರ ಮಾಡಿರುತ್ತಾರೆ. ಇಲ್ಲಿ ಬನ್ನಾಡಿಯವರು ಸಿನೆಮಾ ಆಧಾರಿತ ಈ ಕತಾನಕವನ್ನು ನಾಟಕವಾಗಿ ಅಳವಡಿಸುವಲ್ಲಿ ಸಫಲರಾಗಿದ್ದಾರೆ. `ರಾಶೋಮನ್‘ ನಂತರ ಕುರಸೋವಾನ ಇನ್ನೊಂದು ಸಿನೆಮಾ ನಾಟಕವಾಗಿ ರೂಪಾಂತರವಾಗಿರುವುದನ್ನು ಈ ಕೃತಿಯ ಮುಖೇನ ಕಾಣಬಹುದು.

 

About the Author

ವಸಂತ ಬನ್ನಾಡಿ
(20 September 1955)

ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್‌ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...

READ MORE

Related Books