ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ’ಭಾರತೀಯ ಭಾಷಾ ನಾಟಕ ಮಾಲಿಕೆ’ ಆರಂಭಿಸಿದೆ. ಈ ಮಾಲಿಕೆಯ ಕೃತಿಯಿದು.
ಆಧುನಿಕ ನ್ಯಾಯ ವ್ಯವಸ್ಥೆ, ಪತ್ರಿಕೋದ್ಯಮಗಳ ಅಸಂಗತತೆ ಹಾಗೂ ಈ ವಲಯಗಳು ಕಾರ್‍ಯ ನಿರ್ವಹಿಸುವ ವಿಚಿತ್ರ ರೀತಿಗಳನ್ನು ತಿಳಿಹಾಸ್ಯದ ಹಾಗೂ ಕುಟುಕು ಶೈಲಿಯಲ್ಲಿ ಹೇಳುವ 1128 ರಲ್ಲಿ ಕ್ರೈಂ’ 27 ’ ಮಲಯಾಳಂ ರಂಗಭೂಮಿಯ ಮುಖ್ಯ ಪ್ರಯೋಗಗಳಲ್ಲೊಂದು.
ಮಲಯಾಳಂ ಸಾಹಿತಿ ಸಿ.ಜೆ. ಥೋಮಸ್ ಅವರ ಈ ನಾಟಕವನ್ನು ಕನ್ನಡಕ್ಕೆ ತಂದವರು ತೇರಳಿ ಎನ್ ಶೇಖರ್ ಮತ್ತು ಎಲ್. ಎನ್. ಮುಕುಂದರಾಜ್. 1128 ರಲ್ಲಿ ಕ್ರೈಂ’ 27 ನಾಟಕ ರಚನೆ ಹಾಗೂ ನಾಟಕ ವಿನ್ಯಾಸಗಳ ಬಗ್ಗೆ ಐವತ್ತರ ದಶಕದ ಮಲಯಾಳಂ ರಂಗಭೂಮಿಯಲ್ಲಿ ಚಾಲ್ತಿಯಲ್ಲಿದ್ದ ಕಟ್ಟುಪಾಡುಗಳನ್ನು ವಿರೋಧಿಸಿದ ವಿಶಿಷ್ಟ ನಾಟಕ. ನೈತಿಕ ಹಾಗೂ ರಾಜಕೀಯ ವಿಷಯಗಳನ್ನು ಆಧರಿಸಿದ ’ಎಪಿಕ್’ ನಾಟಕಗಳನ್ನು ನೆನಪಿಗೆ ತರುವ ಈ ನಾಟಕದಲ್ಲಿ ಬದುಕು, ಸಾವು, ನ್ಯಾಯ, ರಾಜ್ಯಾಡಳಿತ , ಪತ್ರಿಕೋದ್ಯಮ, ಪೋಲಿಸ್ ಮೊದಲಾದ ಹಲವು ಸಂಸ್ಥೆಗಳನ್ನು ವಿಮರ್ಶಿಸಲಾಗಿದೆ.
©2024 Book Brahma Private Limited.