ಕ.ವೆಂ. ರಾಘವಾಚಾರ್ ಅವರು 1904 ಕಡಬಾದಲ್ಲಿ ಜನಿಸಿದರು. ಇವರು ಅಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ನಿಘಂಟು ವಿಭಾಗ, ದೆಹಲಿ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡಿದ್ದಾರೆ. ಗ್ರೀಕ್ ಪಾಂಡಿತ್ಯ ಪಡೆದು ನಾಟಕಗಳನ್ನು ಕನ್ನಡಕ್ಕೆ ತಂದರು. ಕನ್ನಡ ಭಾಷಾ ಏಳಿಗೆಗೆ ದುಡಿದವರು. ‘ಸೋಪೊಕ್ಲೇಸ್ ಮಹಾಕವಿಯ ಮೂರು ಗ್ರೀಕ್ ನಾಟಕಗಳು’ ಅವರ ಪ್ರಮುಖ ಕೃತಿ. ಅವರು 1977ರಲ್ಲಿ ನಿಧನರಾದರು.