ಯಕ್ಷನು ಧರ್ಮರಾಯನಿಗೆ ಪ್ರಶ್ನೆಗಳನ್ನು ಕೇಳುವ ಮಹಾಭಾರತದ ಪ್ರಸಂಗವೊಂದರ ವಸ್ತುವೇ ’ಯಕ್ಷಪ್ರಶ್ನೆ. ಲೇಖಕ ಡಿ.ಎನ್. ಅಕ್ಕಿ ಅವರು ಈ ಪ್ರಶ್ನೆಗಳು ಬರೀ ಮಹಾಭಾರತದ ಕಾಲಕ್ಕೆ ಸೀಮಿತವಲ್ಲ. ಇಂದಿಗೂ ಪ್ರಸ್ತುತ ಎಂಬ ಆಲೋಚನೆಯಲ್ಲಿ ಬರೆದು ನಾಟಕವಿದು. ಇದಕ್ಕೆ ಪೂರಕವಾಗಿ ಪ್ರೊ. ಡಿ. ಲಿಂಗಯ್ಯ ಮುನ್ನುಡಿ ಬರೆದು ’ ಹಳೆಯ ವಿಚಾರಧಾರೆಯನ್ನು ಹೊಸತನ್ನಕ್ಕೆ ಮಣಿಸಿದ ರೀತಿ ಕಲಾತ್ಮಕವಾಗಿರುವುದು ಈ ನಾಟಕದ ಹೆಗ್ಗಳಿಕೆ’ ಎಂದಿದ್ದರೆ, ಸಾಹಿತಿ ಶ್ರೀರಂಗಾಚಾರ್ ಕೃತಿಯ ಬೆನ್ನುಡಿಯಲ್ಲಿ ’ಬೀದಿ ನಾಟಕದ ಲಿಖಿತ ರೂಪದಂತಿರುವ ಈ ನಾಟಕದಲ್ಲಿ ಪ್ರೇಕ್ಷಕರೇ ಸ್ವಯಂ ಪಾತ್ರಧಾರಿಗಳಾಗಿ ನಾಟಕದ ಭಾಗವಾಗುವ ಪ್ರಯೋಗಶೀಲತೆಯು, ಅಂದಿನ ಮಹಾಭಾರತಕ್ಕೆ ಆಧುನಿಕ ಸ್ಪರ್ಶ ನೀಡುವಲ್ಲಿ ನಾಟಕ ಯಶಸ್ವಿಯಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.