’ನಾಗಮಂಡಲ’ ನಾಟಕವು ಜಾನಪದ ಕತೆಯನ್ನು ಆಧರಿಸಿ ರಚಿಸಿದ ನಾಟಕ. ಕನ್ನಡದ ಪ್ರಮುಖ ಚಿಂತಕ-ಕವಿ ಎ.ಕೆ. ರಾಮಾನುಜನ್ ಅವರು ಹೇಳಿದ ನಾಟಕ ಆಧರಿಸಿ ಇಬ್ಬರು ಮಹತ್ವದ ನಾಟಕಕಾರರು ನಾಟಕ ರಚಿಸಿದ್ದರು. ಗಿರೀಶ್ ಅವರು ’ನಾಗಮಂಡಲ’ ರಚಿಸಿದರೆ, ಅದೇ ಕಥಾವಸ್ತು ಆಧರಿಸಿದ ಕಂಬಾರರು ’ಸಿರಿಸಂಪಿಗೆ’ ನಾಟಕ ಪ್ರಕಟಿಸಿದ್ದರು. ಒಂದೇ ವಸ್ತು ಆಧರಿಸಿದ ಎರಡು ವಿಭಿನ್ನ ರಂಗಕೃತಿಗಳು ಕನ್ನಡದ ವಿಶೇಷವೇ ಸರಿ.
’ನಾಗಮಂಡಲ’ದ ನಾಯಕಿ ರಾಣಿ. ಅವಳ ಪತಿ ಅಪ್ಪಣ್ಣ. ಪತಿಯನ್ನು ಒಲಿಸಿಕೊಳ್ಳಲು ಬೇರಿನ ಸಾರು ತಯಾರಿಸುವ ರಾಣಿ ಅದು ಒಡೆದು ಹಾಳಾದದ್ದನ್ನು ನೋಡಿ ಸಮೀಪದ ಹುತ್ತಕ್ಕೆ ಸುರಿಯುತ್ತಾಳೆ. ಅಲ್ಲಿನ ನಾಗ ಅವಳ ಮೇಲೆ ಮನಸೋತು ಪತಿಯ ವೇಷದಲ್ಲಿ ಮನೆಯೊಳಗೆ ಬಂದು ರಾಣಿಯೊಡನೆ ಸರಸ-ಸಲ್ಲಾಪ ನಡೆಸುತ್ತಾನೆ. ಅವಳು ಗರ್ಭಿಣಿಯಾದದ್ದನ್ನು ಕೇಳಿ ಕೋಪಗೊಳ್ಳುವ ಪತಿ ತನ್ನ ಹೆಂಡತಿಯ ಮೇಲೆ ಆರೋಪ ಹೊರಿಸುತ್ತಾನೆ. ನಾಗದಿವ್ಯದ ಮೂಲಕ ಸತ್ಯ ಸಾರುವ ರಾಣಿ ಜನಮನ್ನಣೆಗೆ ಪಾತ್ರಳಾಗುತ್ತಾಳೆ.
ಈ ನಾಟಕವನ್ನು ನಟ ಶಂಕರನಾಗ್ ಮೊದಲ ಬಾರಿಗೆ ರಂಗದ ಮೇಲೆ ತಂದಿದ್ದರು. ಟಿ.ಎಸ್. ನಾಗಾಭರಣ ಈ ನಾಟಕದ ಕತೆ ಆಧರಿಸಿ ಚಿತ್ರ ನಿರ್ದೇಶಿಸಿದ್ದರು. ರಂಗ-ತೆರೆಯ ಮೇಲೆ ಮಿಂಚಿದ ’ನಾಗಮಂಡಲ’ ಕನ್ನಡದ ವಿಭಿನ್ನ ಪ್ರಯೋಗಗಳಲ್ಲಿ ಒಂದು.
Soul talk with Girish Karnad | Interview | Actor | Playwright | Director
©2025 Book Brahma Private Limited.