ಕಾಕನಕೋಟೆ

Author : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)

Pages 112

₹ 90.00




Year of Publication: 2015
Published by: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್
Address: ಗವಿಪುರಂ ಬಡಾವಣೆ, ಬೆಂಗಳೂರು

Synopsys

ಮಾಸ್ತಿಯವರ ಜನಪ್ರಿಯ ನಾಟಕ ’ಕಾಕನಕೋಟೆ’. ಚಲನಚಿತ್ರವಾಗಿಯೂ ಜನಪ್ರಿಯವಾಗಿರುವ ಕೃತಿಯಿದು. 1938ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ನಾಟಕವು ನಂತರ ಹಲವು ಮುದ್ರಣ ಕಂಡಿದೆ. 

ಕಾಕನಕೋಟೆ ಎಂಬುದು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಒಂದು ಸ್ಥಳ. ಅದರ ಸುತ್ತಲ ಪ್ರದೇಶದ ಕಾಡನ್ನು ಕಾಕನಕೋಟೆ ಕಾಡು ಎಂದು ಗುರುತಿಸಲಾಗುತ್ತದೆ. ಕಾಡುಕುರುಬರು ಎಂಬ ಸಮುದಾಯದ ಜನ ಈ ಪ್ರದೇಶದ ನಿವಾಸಿಗಳು. ಹೆಗ್ಗಡದೇವನ ಕೋಟೆಯ ಹೆಗ್ಗಡೆ ಹಾಗೂ ಹಾಡಿಯ ಜನರ ನಡುವಿನ ಮುಖಾಮುಖಿ ಈ ನಾಟಕದ ವಸ್ತು. ಕಪ್ಪದ ವಿಷಯದಲ್ಲಿ ಉಂಟಾದ ವಿವಾದವನ್ನು ಈ ಸಮುದಾಯದ ಕಾಚನೆಂಬುವನು ಮೈಸೂರಿನಲ್ಲಿದ್ದು ರಾಜರನ್ನು ಬಲ್ಲವನಾಗಿದ್ದ, ಅವರ ಸಹಾಯದಿಂದ ತನ್ನ ಜನರನ್ನು ಕಷ್ಟದಿಂದ ಪಾರು ಮಾಡಿಸಿದ ಕತೆಯಿದು.

About the Author

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (ಶ್ರೀನಿವಾಸ)
(08 June 1891 - 07 June 1986)

‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...

READ MORE

Related Books