*ಕಲಿಗುಲ” ಕೆ ವಿ ತಿರುಮಲೇಶರ ಎರಡನೆಯ ನಾಟಕ; ಮೊದಲ ನಾಟಕ 'ಟೈಬೀರಿಯಸ್' ಬರೆದ ಬೆನ್ನಲ್ಲೇ ಅವರು ಇದನ್ನು ರಚಿಸಿದ್ದಾರೆ.
ರೋಮಿನ ಅತಿ ಕ್ರೂರಿ ರಾಜರುಗಳಲ್ಲಿ ಕಲಿಗುಲನಿಗೆ ಬಹುಶಃ ಮೊದಲನೆ ಸ್ಥಾನ ದೊರಕುತ್ತದೆ. ಕೇವಲ ಕ್ರೌರ್ಯಕ್ಕಷ್ಟೇ ಅವನು ಹೆಸರಾದವನಲ್ಲ, ವಿಕೃತಕಾಮದಲ್ಲೂ ಅವನನ್ನು ಮೀರಿಸುವವರು ಕಡಿಮೆ ಎನ್ನಲಾಗುತ್ತದೆ. ಇಂಥ ಮನುಷ್ಯನೊಬ್ಬನಿಗೆ ಅಧಿಕಾರ ಸಿಕ್ಕಿದಾಗ ಪ್ರಜೆಗಳ ಪಾಡೇನು ಎನ್ನುವುದನ್ನು ಊಹಿಸಬೇಕು. ಕಲಿಗುಲನ ಪಾಪಗಳಿಗೆ ಸಾಮಾಜಿಕ, ಮನೋವೈಜ್ಞಾನಿಕ, ಅನಾರೋಗ್ಯವೇ ಮೊದಲಾದ ಬಾಹ್ಯ ಕಾರಣಗಳನ್ನು ನೀಡಿ ಅವನನ್ನು ಹಿಂಸಕನಲ್ಲ, ಹಿಂಸಿತನು' ಎಂದು ಸಾಧಿಸಬಹುದು. ಆದರೆ ಆ ಕಾರ್ಯಕ್ಕೆ ತಿರುಮಲೇಶರು ಮುಂದಾಗುವುದಿಲ್ಲ. ಯಾಕೆಂದರೆ, ಹೀಗೆ ನಿರಂಕುಶ ಪ್ರಭುಗಳನ್ನು ಮುಕ್ತರಾಗಿಸುತ್ತ ಹೋದರೆ, ಯಾವ ಅಪರಾಧವನ್ನೂ ಅಪರಾಧವೆಂದು ಅಪರಾಧವೆಂದು ಕರೆಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ.
©2025 Book Brahma Private Limited.