ಖರೇ ಖರೇ ಕಿತ್ತೂರು ಬಂಡಾಯ

Author : ಎಂ.ಎಂ. ಕಲಬುರ್ಗಿ

Pages 72

₹ 50.00




Published by: ಸಂವಹನ
Address: ಮೈಸೂರು

Synopsys

ಬ್ರಿಟಿಷರೊಂದಿಗೆ ಮಲ್ಲಪ್ಪಶೆಟ್ಟಿ ನಡೆಸಿದ ಒಳಸಂಚಿನಿಂದಾಗಿ ಕಿತ್ತೂರು ಸಂಸ್ಥಾನ ಪತನವಾಯಿತು ಎಂಬುದು ಎಲ್ಲರಿಗೂ ತಿಳಿದಂತಹ ಮಾತು. ಆದರೆ ಡಾ. ಎಂ.ಎಂ. ಕಲಬುರ್ಗಿಯವರಿಗೆ ಲಂಡನ್ನಿನಲ್ಲಿ ದೊರೆತ ಬ್ರಿಟಿಷ್‌ ದಾಖಲೆಯೊಂದು ಬೇರೆಯದೇ ಕತೆ ಹೇಳುತ್ತದೆ.

ಕಿತ್ತೂರು ಸಂಸ್ಥಾನ ಪತನಕ್ಕೆ ಮುನ್ನುಡಿ ಬರೆಯುವವನು ಅವರಾದಿ ವೀರಪ್ಪ ಎನ್ನುತ್ತದೆ ಆ ದಾಖಲೆ. ಅಷ್ಟೇ ಅಲ್ಲ ಮಲ್ಲಪ್ಪ ಶೆಟ್ಟಿ ಕೊಲೆಗೆ ಸಂಚು ರೂಪಿಸಿದ್ದು ಕೂಡ ಈತನೇ ಎನ್ನುತ್ತದೆ. ಈ ದಾಖಲೆಯನ್ನು ಆಧರಿಸಿ ಕಲಬುರ್ಗಿ ಬರೆದ ನಾಟಕ ’ಖರೇ ಖರೇ ಕಿತ್ತೂರು ಬಂಡಾಯ’.

ಕವಿ-ಅನುವಾದಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ’'ಖರೇ ಖರೇ ಕಿತ್ತೂರು ಬಂಡಾಯ' ಖರೇ। ಖರೇ ನಾಟಕ ಅನ್ನಿಸಿಕೊಳ್ಳಬೇಕು ಎಂದು ಬಯಸಿದ್ದ. ಅದನ್ನು ನೋಡುವ ಪೂರ್ವದಲ್ಲಿಯೇ ಈಗ ಕಾಣದಾಗಿದ್ದಾನೆ. ಕಿತ್ತೂರಿನ ಇತಿಹಾಸದ ಎಳೆ ಎಳೆ ಬಿಚ್ಚುತ್ತ, ಅಸೂಯಾಪರನಾಗಿದ್ದ ಅವರಾದಿ ವೀರಪ್ಪನ ಕುತಂತ್ರದಿಂದಾಗಿ, ದಿವಾನ ಕುನ್ನೂರ ಮಲ್ಲಪ್ಪನಿಗೆ ಮತ್ತು ಕಿತ್ತೂರ ದೊರೆಗಳಿಗೆ ಒದಗಿದ ಅಪವಾದದ, ದುಃಸ್ಥಿತಿಯ ಯಥಾವತ್ತಾದ ನಾಟಕೀಯ ಚಿತ್ರಣದ ತುಂಬ ಕಲಬುರ್ಗಿಯ ದಿಟ ಮಾತುಗಳಿವೆ, ನೇರ ಕಣ್ಣುಗಳಿವೆ, ಸ್ವಚ್ಛ ಮನಸ್ಸಿದೆ. ಅವನ ಸದಿಚ್ಛೆಯಂತೆ “ಘಟಿತ ಇತಿಹಾಸವು ಕಲ್ಪತ ಸೃಜನಕ್ಕೆ ಹೊರಳುವಾಗ ಮೂಲ ಸತ್ಯಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಲಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books