‘ರಂಗದಂಗಳ’ ಡಾ. ವಿಜಯಾ ಸುಬ್ಬರಾಜ್ ಅವರ ಸಮಗ್ರ ನಾಟಕಗಳ ಸಂಕಲನ. ಮಹಿಳೆ ಅನೇಕ ಬಿಕ್ಕಟ್ಟುಗಳ ನಡುವೆಯೇ ತನ್ನತನ, ಅಭಿವ್ಯಕ್ತಿ ತೋರಬೇಕಿದೆ. ಒಂದೆಡೆ ಪರಂಪರೆ, ಮತ್ತೊಂದೆಡೆ ಈಗಾಗಲೇ ಇರುವ ದಿಗ್ಗಜರ ಮಾರ್ಗ, ಮತ್ತೊಂದೆಡೆ ಅಸ್ತಿತ್ವ ತೋರಬೇಕಾದ, ಉಳಿಯಬೇಕಾದ ಹಂತದಲ್ಲಿ ತಮ್ಮ ನಾಟಕಗಳ ಮೂಲಕ ಹೊಸತನಕ್ಕೆ ಡಾ.ವಿಜಯಾ ಸ್ಪಂದಿಸಿದ್ದಾರೆ.
ತೆಲುಗು, ಹಿಂದಿ, ಪಂಜಾಬಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿರುವ, ರೂಪಾಂತರಿಸಿರುವ ಅವರ ಪ್ರಯತ್ನ ಕಡಿಮೆಯದಲ್ಲ. ಗ್ರೀಕ್, ಇಂಗ್ಲಿಷ್, ಇಟಾಲಿಯನ್, ಸಂಸ್ಕೃತ ಸಾಹಿತ್ಯದ ಅವರ ತಿಳಿವಳಿಕೆ ಗಮನಾರ್ಹ. ಈ ಹಿನ್ನೆಲೆಯಲ್ಲಿ ಮಹಿಳೆಯ ವಿವಿಧ ಮುಖಗಳನ್ನು, ಆಯಾಮ. ಅಭೀಪ್ಸೆ, ಹೊಯ್ದಾಟ, ಪ್ರತಿಭಟನೆ, ವ್ಯಕ್ತಿತ್ವ, ಅಸ್ತಿತ್ವಗಳನ್ನು ತಮ್ಮ ನಾಟಕಗಳ ಮೂಲಕ ಡಾ.ವಿಜಯಾ ನಿರೂಪಿಸಿದ್ದಾರೆ. ಕೃತಿಯಲ್ಲಿ ಪಾಂಚಾಲಿ, ಪಾದ್ರಿಯೊಬ್ಬನ ಕತೆ, ನಗರವಧು ಸಾಲವತಿ, ಪ್ರೇಮ ಸಮಾಧಿ, ದಂಗೆ ಎದ್ದವಳು, ಮತ್ತೊಂದು ಮಹಾಭಾರತ, ಮಿಲನ, ಅನುಬಂಧ ಎಂಬ ಎಂಟು ಕಥೆಗಳಿವೆ.
©2024 Book Brahma Private Limited.