ಕಾಲ ಗುಣ- ತಿರುಪತಿ ನಾಯಕ್ ಅವರ ನಾಟಕ. ಕನ್ನಡ ಸಾಹಿತ್ಯದಲ್ಲಿ ನಾಟಕ ಪ್ರಕಾರಕ್ಕೆ ತನ್ನದೇ ಆದ ಛಾಪು, ಮಹತ್ವ, ಓದುಗರ ವ್ಯಾಪ್ತಿ ವ್ಯವಸಾಯಗಳಿವೆ. ಈಗ್ಗೆ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಯಾವುದೇ ಹೊಸ ನಾಟಕ ಬರಲಿ ಗ್ರಾಮ, ನಗರಗಳೆಂಬ ಭೇದ ಭಾವವಿಲ್ಲದೆ ಜನರು ಪ್ರಯೋಗಕ್ಕೆ ಅಳವಡಿಸುತ್ತಿದ್ದರು. ನಾಟಕಗಳಲ್ಲಿ ವೈವಿಧ್ಯಮಯ ವಿಭಾಗಗಳಿವೆ. ಜಾಣ ನಿರ್ದೇಶಕ ಒಂದು ಸರಳವಾದ ಕತೆಯನ್ನೂ, ಒಂದು ಅದ್ಭುತ ಭಾಷಣವನ್ನೂ ನಾಟಕವನ್ನಾಗಿ ಪ್ರದರ್ಶನಕ್ಕೆ ಸಜ್ಜು ಮಾಡಬಲ್ಲ. ನನ್ನ ಈ ಎರಡು ನಾಟಕಗಳು ಅದ್ಭುತವಾದ ವಿಷಯವನ್ನೇನು ಹೊತ್ತು ಬಂದಿರುವಂತಹವಲ್ಲ. ನಮ್ಮ ರಾಜಕಾರಣಿಗಳು ಆಡುವ ರಾಜಕೀಯ ಆಟವೇ ಒಂದು ನಿರಂತರ ನಾಟಕವಾಗಿರುತ್ತದೆ. ಅದನ್ನು ರಂಗದ ಮೇಲೆ ತಂದು ಮತ್ತಷ್ಟು ನಾಟಕೀಯತೆ ಸಂಯೋಜಿಸಿದರು. ಅವರ ನಿತ್ಯ ನಾಟಕದ ಮುಂದೆ ಇದು ಪೇಲವವಾಗಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ನಾವು ಅಭಿಪ್ರಾಯ ವ್ಯಕ್ತಪಡಿಸುವ, ಪ್ರತಿಭಟಿಸುವ ಸ್ವಾತಂತ್ರ್ಯ ಹೊಂದಿದ್ದೇವೆ. ಅದುವೇ ಈ ನಾಟಕ ರಚನೆಗೆ ಸ್ಫೂರ್ತಿ ಎನ್ನುತ್ತಾರೆ ಲೇಖಕ ತಿರುಪತಿ ನಾಯಕ್. ನಮಗೆ ನಾಯಕರೆಂದು ತಾವೇ ಹೇಳಿಕೊಳ್ಳುವ ಈ ವ್ಯಕ್ತಿಗಳು ರಾಜಕೀಯವನ್ನು ನಿತ್ಯ ಉದ್ಯಮವನ್ನಾಗಿ ಮಾಡಿಕೊಂಡು ಅಧಿಕಾರ ಪಡೆದ ಮೇಲೆ ಪ್ರಜೆಗಳನ್ನು ಪರಿಪರಿಯಾಗಿ ಪೀಡಿಸುತ್ತಾರೆ. ನಾವು ಇಂಥವನ್ನು ದೃಢವಾಗಿ ವಿರೋಧಿಸುತ್ತೇವೆ. ಆದರೂ ಅಸಹಾಯಕರು ಆಗಿ ಬಿಡುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಘನ ನ್ಯಾಯಾಂಗ ವ್ಯವಸ್ಥೆ ಕೈಯಲ್ಲಿ ಚಾಟಿ ಹಿಡಿದು ಭ್ರಷ್ಟರ ಭೂತ ಬಿಡಿಸುತ್ತಿವೆ. ಭ್ರಷ್ಟರನ್ನು ನಾವು ದೃಢವಾಗಿ ವಿರೋಧಿಸಬೇಕು. ಚುನಾವಣೆಯಲ್ಲಿ ನಮ್ಮ ಹಕ್ಕನ್ನು ಚಲಾಯಿಸಬೇಕು. ಅಂದಾಗ ಪ್ರಜಾಪ್ರಭುತ್ವಕ್ಕೆ ಬೆಲೆ. ಇಂಥಹ ಪ್ರಜ್ಞಾಪೂರ್ವಕ ಆಗ್ರಹವನ್ನು ಈ ನಾಟಕ ತಣ್ಣಗೆ ಹೇಳುತ್ತದೆ.
©2024 Book Brahma Private Limited.