ಮಧುಗಿರಿ, ತಿಪಟೂರು, ಗುಬ್ಬಿ ಸುತ್ತಮುತ್ತಲ ಕೆಳವರ್ಗದವರ ಆಡುಭಾಷೆ ’ಸಿಂಗಾರಿತ್ಲು’ ನಾಟಕಕ್ಕೆ ಮೆರಗು ಕೊಟ್ಟಿದೆ. ಹೇಲು ಮತು ಉಚ್ಚೆಯ ವಾಸನೆ ನಾಟಕದ ತುಂಬಾ ಹರಡಿಕೊಂಡು ಮೂಗಿಗೆ ತಟ್ಟುತ್ತಿರುತ್ತದೆ, ಷೇಕ್ಸ್ಪಿಯರ್‌ನ ನಾಟಕ ಮಾಕ್ಬೆತ್ ನಲ್ಲಿ ರಕ್ತದ ವಾಸನೆ ತಟ್ಟುವಂತೆ. ಇವತ್ತಿನ ರಾಜಕೀಯ ಎಷ್ಟು ಅಸಹ್ಯ ಎನ್ನುವುದಕ್ಕೆ ಇದು ಸಾಂಕೇತಿಕ ಎನ್ನಬಹುದು. ಮೊದಲರ್ಧದಲ್ಲಿ ನಾಟಕೀಯ ತಿರುವುಗಳು ಅಷ್ಟಾಗಿ ಕಂಡುಬರುವುದಿಲ್ಲವಾದರೂ, ಸಂತೆಯಲ್ಲಿ ಗೋಲಿಬಾರ್‌ನಿಂದ ಅನೂಹ್ಯ ಬೆಳವಣಿಗೆಗಳು ನಡೆಯುತ್ತವೆ.
©2025 Book Brahma Private Limited.