‘ನಾಡೋಜ ಪಂಪ’ ಪ್ರೊ. ಶಿವರಾಮಯ್ಯನವರ ನಾಟಕ. ಆದಿಕವಿಯ ಕಲಿತನ- ಕಾವ್ಯತನವನ್ನು ನಾಟಕೀಯ ಗುಣಗಳೊಡನೆ ಕಟ್ಟಿಕೊಟ್ಟಿದ್ದಾರೆ ಅವರು. ಕಳ್ಕುಡಿತ, ಪಡಖಾನೆ, ವೇಶ್ಯಾವಾಟಿಕೆಯ ದೃಶ್ಯಗಳು ನಾಟಕಕ್ಕೆ ಮತ್ತೇರಿಸಿವೆ. ಜನರ ರಸಿಕತೆ, ಹಾಸ್ಯ ಸ್ವಭಾವ, ಚಾರಿತ್ರಿಕ ಪ್ರಜ್ಞೆ, ಆಸ್ಥಾನ ಕವಿಗಳ ಅಸೂಯಾಪರತೆ, ಜಾತಿ ಮಾತ್ಸರ್ಯ, ವಿಡಂಬನೆಯೂ ಕೃತಿಯಲ್ಲಿ ವ್ಯಕ್ತವಾಗಿದೆ. ಆದಿಕವಿಯ ಕತೆ ಹೇಳುತ್ತಿದ್ದರೂ ಅನೇಕ ಅಂಶಗಳು ಪ್ರಸ್ತುತ ಸಮಾಜಕ್ಕೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.