ಸ್ವತಂತ್ರ ನಾಟಕಗಳಿರಲಿ, ಅನುವಾದಗಳಿರಲಿ ಡಿ.ಎಸ್.ಚೌಗಲೆಯವರು ತಮ್ಮ ಕಾಲದ ಸಾಮಾಜಿಕ ಬದುಕಿಗೆ ತೀವ್ರವಾಗಿ ಸ್ಪಂದಿಸುವ ಲೇಖಕ.
ಗಾಂಧಿ ಪ್ರಣೀತ ವಿಚಾರಗಳು ನಾಟಕಕಾರರನ್ನು ಬಹುವಾಗಿ ಕಾಡಿದ್ದು, 'ಉದ್ವಸ್ಥ' ನಾಟಕದಲ್ಲಿಯೂ ಗ್ರಾಮಸ್ವರಾಜ್ಯ ಪರಿಕಲ್ಪನೆ ಹರಡಿಕೊಂಡಿದೆ. ನಾಟಕದ ಆರಂಭ ಹಾಗೂ ಮುಕ್ತಾಯದ ದೃಶ್ಯಗಳು ಗಾಂಧಿ ಪುತ್ಥಳಿಯ ಸನ್ನಿಧಿಯಲ್ಲೇ ನಡೆಯುತ್ತವೆ. ನಾಟಕದ ಅರ್ಧಕ್ಕೂ ಹೆಚ್ಚು ಘಟನೆಗಳು ನಡೆಯುವುದು ಸಾರ್ವಜನಿಕ ಸ್ಥಳಗಳಲ್ಲಿ. ಸರ್ಕಲ್, ಬಾರ್, ಎಮ್ಮೆಲ್ಲೆ ಆಫೀಸ್ ಮುಂತಾದ ಜಾಗಗಳಲ್ಲಿ. ಹೀಗೆ ಒಂದು ಕುಟುಂಬದ ಕತೆಯೊಂದಿಗೆ ಸಾರ್ವಜನಿಕ ಜೀವನದಲ್ಲಾದ ಪಲ್ಲಟವನ್ನೂ ನಾಟಕ ಕಟ್ಟಿಕೊಡುತ್ತದೆ. ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ರೈತಾಪಿವರ್ಗಕ್ಕೆ ತಂದೊಡ್ಡಿರುವ ಸಮಸ್ಯೆಗಳ ಕುರಿತು ನಾಟಕ ಬೆಳಕು ಚೆಲ್ಲುತ್ತದೆ.
ಸಂಸ ರಂಗಸಾಹಿತ್ಯ ಪುರಸ್ಕಾರ ಪಡೆದಿರುವ ಈ ಕೃತಿಗೆ ಹಿರಿಯ ಸಾಹಿತಿ ಕೆ.ಮರಳುಸಿದ್ಧಪ್ಪ ಮುನ್ನುಡಿ ಬರೆದಿದ್ದಾರೆ.
©2024 Book Brahma Private Limited.