ಜೇವರಗಿ ರಾಜಣ್ಣ, ಕಳೆದ ಮೂರು ದಶಕಗಳಿಂದ ವೃತ್ತಿರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟ, ನಾಟಕ ಕಂಪನಿ ಮಾಲೀಕ ಹಾಗೂ ನಾಟಕಕಾರರಾಗಿ ಯಶಸ್ಸು ಕಂಡವರು. ಮನುಷ್ಯ ಸಂಬಂಧಗಳು, ಪ್ರಸ್ತುತ ರಾಜಕಾರಣ, ಮನುಷ್ಯ ದೌರ್ಬಲ್ಯ, ಸಮಾಜ ಸೇವೆ, ಶ್ರೀಮಂತಿಕೆಯ ಎಡವಟ್ಟುಗಳು, ಎಂಡೋಸಲ್ಫಾನ್ ಪೀಡಿತರ ನೋವುಗಳ ಕುರಿತ ಕಥಾವಸ್ತು ಈ ನಾಟಕಗಳದ್ದು.
ಹಾಸ್ಯದ ನಡುವೆಯೂ ಗಂಭೀರ ವಿಷಯಗಳನ್ನು ತಟ್ಟುವುದು ಕೃತಿಯ ವಿಶೇಷ. ಇಲ್ಲಿರುವ ಐದೂ ನಾಟಕಗಳು ರಾಜಣ್ಣ ಮಾಲೀಕತ್ವದ ವಿಶ್ವಜ್ಯೋತಿ ಶ್ರೀಪಂಚಾಕ್ಷರ ನಾಟ್ಯ ಸಂಘದಲ್ಲಿ ಯಶಸ್ವಿ ಪ್ರದರ್ಶನ ಕಂಡಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ವೃತ್ತಿರಂಗಭೂಮಿಯಲ್ಲಿ ಅತಿ ಹೆಚ್ಚು ಪ್ರದರ್ಶನ ಕಂಡ ಮತ್ತು ದಾಖಲೆ ನಿರ್ಮಿಸಿ ’ಕುಂಟಕೋಣ ಮೂಕ ಜಾಣ’ ನಾಟಕವೂ ಕೃತಿಯಲ್ಲಿದೆ.
©2025 Book Brahma Private Limited.