ಕರ್ನಾಟಕ ಸಂಗೀತ ಪರಂಪರೆಯಲ್ಲಿ ಭೈರವಿ ಕೆಂಪೇಗೌಡರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಪ್ರಸಿದ್ಧಿಯಾದವರು. ಅಪ್ಪಟ ಗ್ರಾಮೀಣ ಸತ್ವದಲ್ಲಿ ಅರಳಿದ ಅವರು ಅರಮನೆಯ ನೆರಳಿನಲ್ಲಿದ್ದ ಶಾಸ್ತ್ರೀಯ ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ದರ್ಬಾರ್ ದಿರಿಸು, ಆಸ್ಥಾನದ ಶಿಷ್ಟಾಚಾರಗಳನ್ನು ನಿರಾಕರಿಸಿದ ಅವರು , ಹೊಲ ಗದ್ದೆಗಳ ಬದುವಿನಲ್ಲೂ ಶಾಸ್ತ್ರೀಯ ಸಂಗೀತ ಹಾಡಲು ಉತ್ಸುಕರಾಗಿದ್ದರು. ಈ ನಾಟಕವು ಈ ಸಂಗೀತಗಾರನ ಜೀವನ ಸಾಧನೆಯ ಬಗ್ಗೆ ವಿವರಿಸುತ್ತದೆ.
©2024 Book Brahma Private Limited.