ಹಳೆಯ ಗೆಣೆಯರು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 32

₹ 30.00




Year of Publication: 2008
Published by: ದ.ರಾ. ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ

Synopsys

ದ.ರಾ.ಬೇಂದ್ರೆಯವರ ’ಹಳೆಯ ಗೆಣೆಯರು’ ನಾಟಕ ಬರೆದದ್ದು 1956ರಲ್ಲಿ. ಬೇಂದ್ರೆಯವರ ಐದನೆಯ ನಾಟಕ. 26 ಪುಟಗಳ ಪುಟ್ಟ ನಾಟಕ. ಏಕಾಂಕ ಪ್ರಹಸನ. ಸಮಾಜದಲ್ಲಿನ ಹುಚ್ಚಾಟದ ವ್ಯಕ್ತಿಗಳಿಂದ ಪ್ರೇರಿತರಾಗಿ ಬೇಂದ್ರೆಯವರು ಈ ನಾಟಕ ರಚಿಸಿದ್ದಾರೆ. ಈ ನಾಟಕದಲ್ಲಿ ಮೂರು ಪಾತ್ರಗಳಿವೆ. ಒಬ್ಬ ಸೇವಾ ನಿವೃತ್ತ ನ್ಯಾಯಾಧಿಕಾರಿ 'ಪದ್ಮನಾಭರಾಯ'. ಮತ್ತೊಬ್ಬ ಸೇವಾ ನಿವೃತ್ತ ಪೋಲೀಸ್ ಅಧಿಕಾರಿ 'ವಿಶ್ವಾಸರಾಯ' ಮತ್ತು ನಿವೃತ್ತ ನರ್ಸ್ 'ಸುಂದರಾಬಾಯಿ'. ಅಂತರಂಗ ಮತ್ತು ಬಹಿರಂಗಗಳೆರಡೂ ಒಂದೇ ಇರಬೇಕು ಎಂಬುದು ನಾಟಕದ ಆಶಯ. ಈ ನಾಟಕದಲ್ಲಿ ಒಬ್ಬ ಸೇವಾ ನಿವೃತ್ತ ಪೋಲಿಸ ಅಧಿಕಾರಿ ವಿಶ್ವಾಸರಾಯನು ಮಾಯಾತೀತ ಎಂದು ಹೆಸರು ಬದಲಿಸಿ ಒಂದು ಬಂಡೆಗಲ್ಲಿನ ಮೇಲೆ ಕುಳಿತಿರುತ್ತಾನೆ. ’ಹರಿದಾಸ ಎಂದು ಹೆಸರು ಬದಲಿಸಿಕೊಂಡ ಪದ್ಮನಾಭರಾಯ ನಿವೃತ್ತ ಅಧಿಕಾರಿ ಅಲ್ಲಿಗೆ ಬರುತ್ತಾನೆ. ಇಬ್ಬರಿಗೂ ಪರಿಚಯವಾಗಿ ವೇಷ ಬದಲಾವಣೆಯ ಬಗೆಗೆ ವಾದ ನಡೆದು ತಮ್ಮ ವೃತ್ತಿಯಲ್ಲಿರುವಾಗ ನಡೆದ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲದೇ ಡೊಳ್ಳುಹೊಟ್ಟೆ, ಪೊಳ್ಳು ಮೈಯ ಅಡಿಕೆ ತುರುಬಿನ ಸುಂದರಾಬಾಯಿ ಇವರಿಬ್ಬರ ಜೀವನದಲ್ಲಿ ಪ್ರವೇಶ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ಮನಸ್ಸಿನಲ್ಲಿ ತಾಕಲಾಟ. ಭಕ್ತಿಸೂತ್ರ, ಭಗವಧ್ಗೀತೆ, ಭಾಗವತ, ಬ್ರಹ್ಮಸೂತ್ರ, ಯೋಗ ವಾಸಿಷ್ಠ, ಓದುತ್ತಿರುವುದಾಗಿ ಇಬ್ಬರೂ ಚರ್ಚಿಸುತ್ತಿರುವಾಗ ಅಲ್ಲಿಗೆ ಬಂದ ಸುಂದರಾಬಾಯಿ ವೃತ್ತಿ ಜೀವನದಲ್ಲಿ ತಾನು ಮಾಡಿದ್ದ ಎಲ್ಲ ಪಾಪಗಳನ್ನು ಪಂಚಪುರಕ್ಕೆ ಹೋದಾಗ ಗುರುವಿನ ಎದುರು ದೀಕ್ಷೆಯನ್ನು ತೆಗೆದುಕೊಂಡಿದ್ದೇನೆ’ ಎಂದು ಹೇಳಿ ಅಲ್ಲಿಂದ ಹೊರಟುಹೋಗುತ್ತಾಳೆ. ಅಂತರಂಗದಲ್ಲಿ ಯಾವುದೇ ಬದಲಾವಣೆ ಕಾಣದ ವಿಶ್ವಾಸರಾಯರು ಮತ್ತು ಪದ್ಮನಾಭರಾಯರು ಸುಂದರಾಬಾಯಿಯನ್ನು ನಾಚಿಗೆಟ್ಟ ಹೆಂಗಸು ಎಂದು ಅಪವಾದ ಮಾಡುತ್ತಾರೆ. ಈ ನಾಟಕದಲ್ಲಿ ಮೂರು ಪಾತ್ರಗಳಲ್ಲಿ ಸುಂದರಾಬಾಯಿ ಮಾತ್ರ ಬದಲಾದವಳು. ’ನಾಟಕ ಕ್ರಿಯೆಯು ಮಾತಿನ ಹಂತದಿಂದ ಮೇಲೇಳದೇ ಹರಟೆಯಾಗಿದೆ’ ಎಂದು ಜಿ. ಎಸ್. ಆಮೂರ ಅಭಿಪ್ರಾಯಪಟ್ಟಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books