ಬುದ್ಧ

Author : ನಾರಾಯಣ ಘಟ್ಟ

Pages 80

₹ 100.00




Year of Publication: 2018
Published by: ಗಾರ್ಗಿ ಪ್ರಕಾಶನ
Address: ಕವಿತೆ, #823, 5ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, 4ನೇ ಹಂತ, ಬಿಇಎಂಎಲ್‌ ಲೇಔಟ್‌, ರಾಜರಾಜೇಶ್ವರಿನಗರ, ಬೆಂಗಳೂರು
Phone: 9916724041

Synopsys

ಕೋಲಿಯ ಮತ್ತು ಶಾಕ್ಯರ ನಡುವೆ ಹರಿಯುವ ರೋಹಿಣಿ ಹಂಚಿಕೆಯ ಪ್ರಶ್ನೆ ಉದ್ಭವಿಸಿ, ಯುದ್ಧ ಸನ್ನಿವೇಶ ನಿರ್ಮಾಣವಾಗುವುದರಿಂದ ನಾಟಕ ಆರಂಭವಾಗುತ್ತದೆ. ಸಿದ್ಧಾರ್ಥನ ತಾತ್ವಿಕ ಜಿಜ್ಞಾಸೆ, ಗೃಹತ್ಯಾಗ, ಸಾಧನೆಯಲ್ಲಿಯ ಅಡ್ಡಿಗಳು, ಅನುಕೂಲಗಳು, ಕೊನೆಗೆ ಸಿದ್ಧಾರ್ಥ ಬದುಕಿನ ಸತ್ಯವನ್ನು ಕಂಡುಕೊಂಡು ಗೌತಮಬುದ್ಧನಾಗುವ ಪರಿ ಇತ್ಯಾದಿಗಳನ್ನು ಈ ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ನಾರಾಯಣ ಘಟ್ಟ ಅವರ ಈ ನಾಟಕ ಸಾವಿರಾರು ವರ್ಷಗಳಿಂದ ಮನುಷ್ಯ ಬದುಕಿಗೆ ಆವರಿಸಿಕೊಂಡಿರುವ ಅಜ್ಞಾನ, ಅಂಧಾನುಕರಣೆ, ಸ್ಪೃಶ್ಯ- ಅಸ್ಪೃಶ್ಯರೆಂಬ ಭೇದ, ಸ್ತ್ರೀ-ಪುರುಷರಲ್ಲಿಯ ಶ್ರೇಷ್ಠ-ಕನಿಷ್ಟ ಭಾವಗಳನ್ನು ತೊಡೆದು, ಮನುಷ್ಯರಷ್ಟೇ ಅಲ್ಲ ಸಕಲ ಜೀವರಾಶಿಗಳು, ಸಮಾನತೆಯಿಂದ, ಶಾಂತಿಯಿಂದ ಹಾಗೂ ನೆಮ್ಮದಿಯಿಮದ ಬದುಕಲು ಸ್ವತಂತ್ರವಾದವು ಎಂದು ಸಾರುವ ಬುದ್ಧನ ನಡೆಯನ್ನು ಸಾರುತ್ತದೆ.

Related Books