ಕನ್ನಡ ರಂಗ ರಚನೆಯಲ್ಲಿ ತನ್ನದೇ ಬೆರಗನ್ನು ಮೂಡಿಸಿದ ಎಚ್.ಎಸ್. ಶಿವಪ್ರಕಾಶ್’ ಅವರ ಹಲವು ನಾಟಕಗಳ ಕ್ರೋಢಿಕರಣವೇ ಈ ಕೃತಿ. ನಾಟಕ ರಚನೆಯ ಹಿರಿಯ ಪ್ರತಿಭೆಗಳಾದ ಕಾರ್ನಾಡ್, ಕಂಬಾರ, ಲಂಕೇಶ್ ರವರ ನಡುವೆಯೂ ಶಿವಪ್ರಕಾಶ್ ತಮ್ಮದೇ ವೈಶಿಷ್ಟ್ಯವನ್ನು ಪಡೆದಿದ್ದಾರೆ. ಸಮಕಾಲೀನ ರಂಗಭೂಮಿಯ ಶ್ರೇಷ್ಠ ನಿರ್ದೇಶಕರುಗಳ ನಿರ್ದೇಶನದಲ್ಲಿ ಅವರ ಹಲವು ನಾಟಕಗಳು ರಂಗ ಭೂಮಿ ಪ್ರವೇಶ ಪಡೆದಿದೆ. ಇದುವರೆಗೆ ಇವರು ರಚಿಸಿದ ನಾಟಕಗಳನ್ನು ಕ್ರೂಢೀಕರಿಸಿ ಹೊತ್ತು ತಂದಿರುವ ಈ ಕೃತಿ ಅಪೂರ್ವ ರಂಗಸಂಗ್ರಹವನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸುತ್ತದೆ.
©2025 Book Brahma Private Limited.