ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಕೃತಿ ’ ವೈಶಂಪಾಯನ ತೀರ’. ಸಾಹಿತಿ, ಅನುವಾದಕರಾದ ಎಲ್.ಎನ್. ಮುಕುಂದರಾಜ್ ಈ ನಾಟಕವನ್ನು ರಚಿಸಿದ್ದಾರೆ. ಸಾವಿರಾರು ವರ್ಷಗಳ ಮನುಷ್ಯನ ನಡೆಯನ್ನು ಪುರಾಣೀಕರಿಸಿರುವ ವ್ಯಾಸಭಾರತವನ್ನು ಬಳಸಿಕೊಂಡು ಪಂಪ, ಕುಮಾರವ್ಯಾಸ, ರನ್ನರು ಕಾವ್ಯಗಳನ್ನು ರಚಿಸಿದ್ದಾರೆ. ವರ್ತಮಾನದ ಮನುಷ್ಯನ ಸಂಘರ್ಷಗಳನ್ನು ಕವಿ ಮುಕುಂದರಾಜ್ ಈ ಕೃತಿಯಲ್ಲಿ ಹೇಳಲು ಬಳಸಿಕೊಂಡಿದ್ದಾರೆ. ನಾಟಕವು ರಂಗದಲ್ಲಿ ಭಾರತ ಕದನದ ವರ್ತಮಾನಕ್ಕೆ ಮುಖಾಮುಖಿಯಾಗಿ ನಾಟಕೀಯತೆ ಹೆಚ್ಚುತ್ತದೆ.
©2024 Book Brahma Private Limited.