ಉತ್ತರ ಕರ್ನಾಟಕ ಜನಪದ ಸಾಹಿತ್ಯದ ಕೆನೆಯಂತೆ ಇರುವ ಕೃತಿ ಸಂಗ್ಯಾ-ಬಾಳ್ಯಾ. ಇದನ್ನು ಆಧರಿಸಿ ಡಾ. ಕಲಬುರ್ಗಿ ರಚಿಸಿರುವ ಸಣ್ಣಾಟ ’ಖರೇ ಖರೇ ಸಂಗ್ಯಾ ಬಾಳ್ಯಾ’.
ಸಂಗ್ಯಾ-ಬಾಳ್ಯಾ ಕೃತಿಗಳು ಹಲವು ಇರುವಾಗ, ಕಲಬುರ್ಗಿ ಇದನ್ನೇಕೆ ಬರೆದರು ಮತ್ತು ’ಖರೇ ಖರೇ’ ಎಂಬ ಶೀರ್ಷಿಕೆ ಏಕೆ ಕೊಟ್ಟರು ಎಂಬುದು ಕುತೂಹಲದ ಸಂಗತಿ. ಪತ್ತಾರ ಮಾಸ್ತರನ 'ಸಂಗ್ಯಾ-ಬಾಳ್ಯಾ' ಪಠ್ಯದಲ್ಲಿ ಚಿತ್ರಿತವಾಗಿರುವ ಗಂಗಾ, ಸಂಗ್ಯಾನೊಂದಿಗೆ ಅನೈತಿಕ ಸಂಬಂಧ ಹೊಂದಿದ ಹೆಣ್ಣು. ಆದರೆ ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುವ ಮೌಖಿಕ ಸಾಹಿತ್ಯ ತನಗೆ ದಕ್ಕದ ಗಂಗಾಳ ಮೇಲಿನ ಸೇಡು ತೀರಿಸಿಕೊಳ್ಳಲು ಪತ್ತಾರ ಮಾಸ್ತರ ಆಟ ಬರೆದನೆಂದು ಹೇಳುತ್ತದೆ. ಕಲಬುರ್ಗಿ ಅವರ ನಾಟಕ ಮೌಖಿಕ ಸಾಹಿತ್ಯದ ನಿಲುವನ್ನು ಸಮರ್ಥಿಸುವಂತಿದೆ.
©2025 Book Brahma Private Limited.