ಡಾ. ವಿಜಯಾ ಸುಬ್ಬರಾಜ್ ಅವರ ಕಥಾಸಂಕಲನ ‘ಪಾಂಚಾಲಿ ಮತ್ತು ಇತರ ನಾಟಕಗಳು’ . ಈ ಕೃತಿಯಲ್ಲಿ ಪಾಂಚಾಲಿ, ಪಾದ್ರಿಯೊಬ್ಬನ ಕತೆ, ನಗರವಧು ಸಾಲವತಿ ಎಂಬ ಮೂರು ನಾಟಕಗಳಿವೆ. ‘ಪಾಂಚಾಲಿ’ ನಾಟಕವನ್ನು ಗ್ರೀಕ್ ನಾಟಕದ ಮಾದರಿಯ ಮೇಲೆ ರಚಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ಲೇಖಕಿ ವಿಜಯಾ.
ಮಹಾಭಾರತದಲ್ಲಿ ನಡೆದ ಸಂಗತಿಗಳಿಗೆ, ಸನ್ನಿವೇಶಗಳಿಗೆ ಪ್ರಮುಖ ಸ್ತ್ರೀ ಪಾತ್ರಗಳಾದ ಪಾಂಚಾಲಿ, ಗಾಂಧಾರಿ, ಕುಂತಿಯರು ಹೇಗೆ ಪ್ರತಿಕ್ರಿಯಿಸಿರಬಹುದು ಎಂಬುದನ್ನು ಕಾಣಿಸಿರುವುದರ ಜೊತೆಗೆ ಅವರ ಅಸಹಾಯಕತೆಗೆ ಅವರೇ ಸ್ಪಂದಿಸಿರಬಹುದಾದ ರೀತಿಯನ್ನೂ ಪಾಂಚಾಲಿ ಕೀಚಕನ ದೌರ್ಜನ್ಯ, ದುರಾಕ್ರಮಣಗಳನ್ನು ಹೇಗೆ ತಾನೇ ಸ್ವತಃ ಎದುರಿಸಿರಬಹುದೆಂಬುದನ್ನು ಕಾಣಿಸುವುದೇ ಈ ನಾಟಕದ ಪ್ರಮುಖ ಆಶಯವಾಗಿದೆ.
ಮಹಾಭಾರತದ ಈ ಪ್ರಮುಖ ಸ್ತ್ರೀ ಪಾತ್ರಗಳ ಅಂತಸ್ಥ ಭಾವ ತುಮುಲಗಳನ್ನು ಅವರ ಎದೆಯಾಳದ ನಿಗೂಢ ನೋವು ನಲಿವುಗಳನ್ನೂ ಹೆಕ್ಕಿ ಹೊರಹೊಮ್ಮಿಸುವ ಪ್ರಯತ್ನವೇ ಈ ನಾಟಕವಾಗಿದೆ.
‘ಪಾದ್ರಿಯೊಬ್ಬನ ಕತೆ’ ನಾಟಕವನ್ನು ನೊಬೆಲ್ ಪ್ರಶಸ್ತಿ ಪಡೆದ ಇಟಾಲಿಯನ್ ಕಾದಂಬರಿಗಾರ್ತಿ ಗ್ರೇಸಿಯಾ ದ ಲೆದ್ದಾ ಅವರ ’ಮದರ್”ಕಾದಂಬರಿಯ ಕಥಾವಸ್ತುವನ್ನು ಆಧರಿಸಿ ರಚಿಸಲಾಗಿದೆ. ‘ನಗರವಧು ಸಾಲವತಿ’ ಹಿಂದಿ ಸಾಹಿತ್ಯ ಕ್ಷೇತ್ರದ ಮಹಾನ್ ಲೇಖಕ ಜಯಶಂಕರ್ ಪ್ರಸಾದ್ ಅವರ ಸಣ್ಣಕತೆ ಸಾಲವತಿಯನ್ನು ಆಧರಿಸಿ ಬರೆದ ಕತೆಯಾಗಿದೆ.
©2024 Book Brahma Private Limited.