ಭಾರತ ದೇಶವನ್ನು ಆಳಿದ ಅನೇಕ ರಾಜರುಗಳಲ್ಲಿ ಕೊಲ್ಲಾಪುರದ ಛತ್ರಪತಿ ಶಾಹೂ ಮಹಾರಾಜರು ಕೂಡ ಒಬ್ಬರು. ಇವರು 28 ವರ್ಷಗಳ ಕಾಲ ಆಡಳಿತವನ್ನು ನಡೆಸಿದ್ದಾರೆ. ಅಸ್ಪೃಶ್ಯತೆಯನ್ನು ನಿವಾರಿಸಲು, ಬಡ ಶೂದ್ರರ ಮಕ್ಕಳಿಗೆ ಅಕ್ಷರ ಕಲಿಸಲು, ಉಚಿತ ಮತ್ತು ಕಡ್ಡಾಯ ಶಿಕ್ಚಣ ನೀಡಲು, ಹೆಣ್ಣು ಮಕ್ಕಳಿಗೆ ಹಲವು ಬಗೆಯ ಹಕ್ಕು ನೀಡಲು, ನೇಕಾರರಿಗೆ ಧೈರ್ಯ ತುಂಬಲು, ರೈತರಿಗೆ ಬೆಂಬಲ ಕೊಡಲು ಛತ್ರಪತಿ ಶಾಹೂ ಮಹಾರಾಜರು ಕೈಗೊಂಡ ಕಾರ್ಯಗಳ ವಿವರಗಳನ್ನು ಈ ಕೃತಿಯೂ ನಮಗೆ ನೀಡುತ್ತದೆ. ಸಾಮಾಜಿಕ ರಾಜಕೀಯ ಕ್ಷೇತ್ರದ ಉಜ್ವಳ ಅಧ್ಯಾಯಗಳು ಈ ಕೃತಿಯಲ್ಲಿದೆ. ಛತ್ರಪತಿ ಶಾಹೂ ಮಹಾರಾಜರ ಕುರಿತ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
©2025 Book Brahma Private Limited.