ಮಾರಾಟಗಾರನ ಸಾವು

Author : ಎಂ.ಎಸ್.ರಘುನಾಥ್

Pages 112

₹ 140.00




Year of Publication: 2018
Published by: ಸೃಷ್ಟಿ ಪಬ್ಲಿಕೇಷನ್ಸ್
Address: ಸೃಷ್ಟಿ ಪ್ರಕಾಶನ, #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9480966668

Synopsys

’ಮಾರಾಟಗಾರನ ಸಾವು’  ಕೃತಿಯು - ಆರ್ಥರ್ ಮಿಲ್ಲರ್ ನ, ಡೆತ್ ಆಫ್ ಎ ಸೆಲ್ಸ್ ಮ್ಯಾನ್ ನಾಟಕದ ಕನ್ನಡಾನುವಾದವಾಗಿದೆ. ಆರ್ಥರ್ ಮಿಲ್ಲರ್ ಅಮೆರಿಕಾದ ಪ್ರತಿಭಾವಂತ ಲೇಖಕ. ಅವನ ನಾಟಕವನ್ನು ಭಾಷಾಂತರಿಸುವುದು  ಸವಾಲು. ಮೊದಲಿಗೆ ಅದೊಂದು ಅಮೇರಿಕನ್ ನಾಟಕವಾಗಿತ್ತು. ಬ್ರಿಟಿಷ್ ಇಂಗ್ಲೀಷ್ ಗಿಂತಲೂ ಭಿನ್ನವಾದ ಪದಗಳು, ಉಚ್ಛಾರಣೆಗಳು, ನುಡಿಗಟ್ಟು, ಸೂಕ್ತಿಗಳು, ಪದಗುಚ್ಛಗಳು, ಬಳಕೆಯ ಮಾತುಗಳಿರುತ್ತವೆ. ಆದರೆ ಆ ಎಲ್ಲವನ್ನು ಎಂ.ಎಸ್. ರಘುನಾಥ್ ಅವರು ಯಶಸ್ವಿಯಾಗಿ ಸಾಧಿಸಿದ್ದಾರೆ.

About the Author

ಎಂ.ಎಸ್.ರಘುನಾಥ್
(08 January 1950)

ಮೂಲತಃ ಮೈಸೂರಿನವರಾದ ಎಂ.ಎಸ್.ರಘುನಾಥ್ ಅವರು ಜನಿಸಿದ್ದು 1950 ಜನವರಿ 8 ರಂದು. ಮೈಸೂರು ಹಾಗೂ ಬೆಂಗಳೂರನಲ್ಲಿ ಶಿಕ್ಷಣ ಪಡೆದಿರುವ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ರಾಜ್ಯದ ಹಲವಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನೆರಳಿನ ರೇಖೆಗಳು ಅನುವಾದಿತ ಕೃತಿಗೆ ಶಿವಮೊಗ್ಗ ಕರ್ನಾಟ ಸಂಘ ಪುಸ್ತಕ ಬಹುಮಾನ ಬಂದಿದೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ನೀಲಿಗುಚ್ಚ(ಯೂರೋಪಿಯನ್ ಆಯ್ದ ಕಥೆಗಳ ಅನುವಾದ), ಜವಹರಲಾಲ್‌ ನೆಹರೂ, ಪ್ರವಾಹಕ್ಕೆ ಎದುರಾಗಿ, ನೆರಳಿನ ರೇಖೆಗಳು, ಕರ್ನಲ್‌ಗೆ ಯಾರು ಬರೆಯುವುದಿಲ್ಲ, G.P Rajarathnam, Caught in the world of Binaries ...

READ MORE

Related Books