ಭಗವಾನ್ ಮಹಾವೀರರ ಎರಡು ಸಾವಿರದ ಆರುನೂರನೆಯ ಜನ್ಮಕಲ್ಯಾಣ ಮಹೋತ್ಸವದ ಅಂಗವಾಗಿ ಜೈನಧರ್ಮ ಮತ್ತು ಭಗವಾನ್ ಮಹಾವೀರರ ವಿಚಾರ ಹಾಗೂ ಉಪದೇಶಗಳನ್ನೊಳಗೊಂಡ ನಾಟಕವಾಗಿ ’ಅರಹಂತ’ ರಚನೆಯಾಗಿದೆ.
ಇತಿಹಾಸದ ಸಣ್ಣ ಎಳೆಯನ್ನು ಆಧಾರವಾಗಿಟ್ಟುಕೊಂಡು ಬೆಳೆಸಿರುವ ಈ ನಾಟಕವು ಹಿಂಸೆ-ಪ್ರತಿಹಿಂಸೆ, ಅಹಿಂಸೆಯ ಚಿತ್ರಣವನ್ನು ಕೊಡುವ ಒಂದು ಪ್ರಯತ್ನವಾಗಿದೆ.
’ಅರಹಂತ’ ಪ್ರಾಚೀನ ಭಾರತ ಇತಿಹಾಸದ ಒಂದು ಎಳೆಯನ್ನು ರೇಖಿಸುತ್ತಾ , ಹಿಂಸಾಮೀಮಾಂಸೆಯ ಭೀಕರ ವರ್ಣ ಛಾಯೆಗಳನ್ನು ತುಂಬುತ್ತಾ ಆಕರ್ಷಕವಾದ ಚಿತ್ರವನ್ನು ಕಟ್ಟಿಕೊಡುತ್ತದೆ.
ಈ ನಾಟಕದ ಅಂಶವಾಗಿರುವುದು ಅಹಿಂಸೆಯ ದರ್ಶನವಾದ, ಜೈನಧರ್ಮದ ಅನುಯಾಯಿಯಾದ ಖಾರವೇಲ ಪ್ರತೀಕಾರಕ್ಕಾಗಿ ಹಿಂಸೆಯ ಆವಾಹನೆ ಮಾಡಿಕೊಂಡು ಕ್ರೂರಿಯಾಗುವುದರಲ್ಲಿ ಎನ್ನುವುದನ್ನು ಈ ನಾಟಕ ಕಟ್ಟಿಕೊಡುತ್ತದೆ.
©2024 Book Brahma Private Limited.