ಬೆಳಕ ಬಿತ್ತುವ ಬದುಕು

Author : ಸಂಪಿಗೆ ತೋಂಟದಾರ್ಯ

Pages 102

₹ 80.00




Year of Publication: 2019
Published by: ಕರ್ನಾಟಕ ಸಾಹಿತ್ಯ ಪರಿಷತ್
Address: #83/1, 15ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560040
Phone: 9448119060

Synopsys

ಪ್ರೊ, ಸಂಪಿಗೆ ತೋಂಟದಾರ್ಯ ಅವರು ಬರೆದಿರುವ 'ಬೆಳಕ ಬಿತ್ತುವ ಬದುಕು' ನಾಟಕ ಈ ಕಾಲದ ನಮ್ಮ ಧಾರ್ಮಿಕ ನೆಲೆಗಟ್ಟನ್ನು ಹೆಚ್ಚು ಅರ್ಥಪೂರ್ಣವಾಗಿಸುವಲ್ಲಿ ಬಹಳ ಮಹತ್ವದ ಕೃತಿಯಾಗಿದೆ. ಭಗವದ್ಭಕ್ತಿಯ ಹೆಸರಿನಲ್ಲಿ ರೂಪಿಸಿಕೊಂಡಿರುವ ಕೆಲವೊಂದು ಅಜ್ಞಾನದ ಪರದೆಯನ್ನು ಸರಿಸಿ ಜ್ಞಾನದ ಬೆಳಕು ಹರಿಸುವ ಈ ಕೃತಿಯು ಮಹಾಭಾರತದ ಕಥೆಯನ್ನು ಆಧರಿಸಿದೆಯಾದರೂ ಅದರ ನಿರೂಪಣೆ ಕಾಲಾತೀತವಾಗಿ ರೂಪುಗೊಂಡಿದೆ. ಮತಪಂಥಗಳ ಮಿತಿಗಳನ್ನು ಮೀರಿ ಆಧುನಿಕತೆಯ ನೆಲೆಯಲ್ಲಿ ಎಲ್ಲರಿಗೂ ಹತ್ತಿರವಾಗುವ ಅದ್ಭುತವಾದ ಜ್ಞಾನದ ಎಳೆಯೊಂದನ್ನು ಎತ್ತಿತೋರುವ ಪ್ರಯತ್ನ ಈ ನಾಟಕದಲ್ಲಿದೆ. ವೈಜ್ಞಾನಿಕ ವಿಚಾರಧಾರೆಯೊಂದಿಗೆ ಆಧ್ಯಾತ್ಮದ ಒಳಹೊಕ್ಕವರಿಗೆ ಮಾತ್ರ ತೆರೆದುಕೊಳ್ಳಬಹುದಾದ ಜ್ಞಾನದ ತಿಳಿವೊಂದನ್ನು ಈ ಮೂಲಕ ನಾಟಕಕಾರರು ಜನಸಾಮಾನ್ಯರೆಲ್ಲರಿಗೂ ಮುಟ್ಟುವಂತೆ ಮಾಡಿರುತ್ತಾರೆ. ಮಾಂಸ ಮಾರುವಾತನೊಬ್ಬ ಮಹರ್ಷಿ ಎಂದೆನಿಸಿಕೊಂಡಾತನಿಗೆ ತಿಳಿಹೇಳುವ ಧರ್ಮರಹಸ್ಯದ ಕಥೆಯನ್ನು ಆಧರಿಸಿ ಬರೆದಿರುವ ಈ ನಾಟಕ, ಸಾಹಿತ್ಯ ಲೋಕದ ಮುಕುಟಮಣಿಯಾಗುವ ಯೋಗ್ಯತೆ ಉಳ್ಳದ್ದು ಎಂಬ ಅನಿಸಿಕೆ ನನ್ನದಾಗಿದೆ ಎನ್ನುತ್ತಾರೆ ತೀರ್ಥರಾಮ ವಳಲಂಬೆ.

About the Author

ಸಂಪಿಗೆ ತೋಂಟದಾರ್ಯ

ರಂಗಕರ್ಮಿ, ಬರಹಗಾರ, ಪ್ರಾಧ್ಯಾಪಕರಾದ ತೋಂಟದಾರ್ಯ ಸಂಪಿಗೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡದ ಕಲಾದೇಗುಲ ಸಂಸ್ಥೆಯ ಸ್ಥಾಪಕ ಸದಸ್ಯರೂ ಕೂಡ ಆಗಿದ್ದಾರೆ. ವೀಡಿಯೋ ಡಾಕ್ಯುಮೆಂಟರಿ, ಕಿರುಚಿತ್ರಗಳಿಗೆ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ನೊಬೆಲ್‌ ಪ್ರಶಸ್ತಿ ವಿಜೇತ ಪ್ರೊ.ಎಸ್. ಚಂದ್ರಶೇಖರ್‌ ಅವರ ಜೀವನ ಚರಿತ್ರೆ ಕೃತಿ ‘ಚಂದ್ರ’ ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಳಕ ಬಿತ್ತುವ ಬದುಕು ಇವರು ರಚಿಸಿದ ನಾಟಕ.  ...

READ MORE

Related Books