ಸಾಹಿತಿ ನಾ. ಡಿಸೋಜ ಅವರ ಕೈತಾನ್ ಗಾಂಧಿಯ ಸ್ವಾತಂತ್ಯ್ರ ಹೋರಾಟ ಕಾದಂಬರಿಯನ್ನು ಆಧರಿಸಿ ರಚಿಸಿರುವ ನಾಟಕ ’ ಮುಳ್ಳಿನ ಕಿರೀಟ’.
ಈ ನಾಟಕವನ್ನು ಲೇಖಕ, ಅನುವಾದಕರಾದ ಎಲ್.ಎನ್.ಮುಕುಂದರಾಜ್ ಅವರು ರಚಿಸಿದ್ದಾರೆ.
ಭಾರತ ಸ್ವಾತಂತ್ಯ್ರ ಸಂಗ್ರಾಮ ಚಳುವಳಿಯ ಮುಂಚೂಣಿಗೆ ಗಾಂಧೀಜಿ ಬಂದ ಮೇಲೆ ’ಮಾಡು ಇಲ್ಲವೆ ಮಡಿ’ ಎನ್ನುವ ಕರೆಗೆ ಓಗೊಟ್ಟು ಲಕ್ಷಾಂತರ ಜನರು ಸೇರಿದರು. ಬಡವರು, ವಿದ್ಯಾರ್ಥಿಗಳು, ಹೆಂಗಸರು, ಮಕ್ಕಳು, ವೃದ್ಧರು, ಮತ್ತು ಹಿಂದೂ ಮುಸ್ಲಿಂ, ಸಿಖ್ ಜನಾಂಗದವರೂ ಇದ್ದರು. ಇಂತಹ ಮಹಾಸಂಗ್ರಾಮದ ಸಂಕಥನದಲ್ಲಿ ಕ್ರೈಸ್ತರ ಕಾಣಿಕೆ ಏನು ಎಂಬ ಶೋಧಕ್ಕೆ ಎಲ್.ಎನ್. ಮುಕುಂದರಾಜ್ ಅವರ ’ಮುಳ್ಳಿನ ಕಿರೀಟ’ ನಾಟಕ ಸಾಕ್ಷಿಯಾಗುತ್ತದೆ.
©2024 Book Brahma Private Limited.