ಉದ್ಧಾರ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 96

₹ 75.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ ಎಂಟನೆಯ ನಾಟಕ ಉದ್ಧಾರ (1946). ಸ್ವತಂತ್ರ ಪೂರ್ವದ ನಮ್ಮ ಸಮಾಜದಲ್ಲಿಯ ಒಡಕು, ಶೋಷಣೆ, ಅದಕ್ಕೆ ಒಳಗಾದ ಪಂಚಮರ ಉದ್ದಾರ ಬಯಸುವ ವ್ಯಕ್ತಿಗಳ ಸ್ವಾರ್ಥದ ಚಿತ್ರಣ ನೀಡುತ್ತದೆ. ’ಉದ್ಧಾರ' ನಾಟಕದಲ್ಲಿ ಬರುವ ಪಾತ್ರಗಳು ವಾಸ್ತವದ ನೆಲೆಯಲ್ಲಿ ಹೆಚ್ಚು ಅರ್ಥಪೂರ್ಣತೆಯನ್ನು ಕಂಡಿವೆ. ಎಚ್.ಕೆ.ರಂಗನಾಥರವರು ’ಉದ್ಧಾರಕ್ಕೆ ಅಸ್ಪೃಶ್ಯತೆಯ ಬಗ್ಗೆ ಮೊದಲ ನಾಟಕವೆಂದು ಐತಿಹಾಸಿಕ ಮಹತ್ವವಿದೆ' ಎನ್ನುತ್ತಾರೆ. ಇಂದಿನ ಸಮಾಜದಲ್ಲಿರುವ ಅತ್ಯಂತ ಜಟಿಲವಾದ ಸಮಸ್ಯೆಯನ್ನು ಬೇಂದ್ರೆಯವರು ಬಹು ಹಿಂದೆಯೇ ಯಶಸ್ವಿಯಾಗಿ 'ಉದ್ಧಾರ' ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books