ಡಾ. ಬಸವಪ್ರಭು ಪಾಟೀಲರ ಈ 'ಬೆಳಗು' ನಾಟಕ ಸಿದ್ದರಾಮಅಲ್ಲಮಪ್ರಭು ಕಲ್ಯಾಣಕ್ಕೆ ಬರುವುದರೊಂದಿಗೆ ಪ್ರಾರಂಭವಾಗುತ್ತದೆ. ನೀಲಾಂಬಿಕೆ (ನೀಲಮ್ಮ), ಹಡಪದಪ್ಪಣ್ಣ ಬೆಳಗಿನಲ್ಲಿ ಬೆಳಗಾದ ಬಸವಣ್ಣನವರ ನಿರ್ವಾಣವಾರ್ತೆಯನ್ನು ಗಮನಿಸುವುದರಲ್ಲಿ ಮುಕ್ತಾಯವಾಗುತ್ತದೆ. ಮಧ್ಯ ಅಕ್ಕನ ಚೇತೋಹಾರಿಯಾದ ಆಗಮನವೂ ಇದೆ.
ಶೂನ್ಯ ಸಂಪಾದನೆಯನ್ನು ನೆನಪಿಸಿಕೊಳ್ಳುವಂತೆ ದೃಶ್ಯಗಳಿದ್ದು, ಹರಳಯ್ಯನ ಮಗ, ಮಧುವರಸರ ಮಗಳು-ಪ್ರೇಮ ವಿವಾಹ ಸಂದರ್ಭದಲ್ಲಿ ನಾಟಕಕ್ಕೆ ಒಂದು ಕೈಮ್ಯಾಕ್ಸ್ ಬರುತ್ತದೆ. ಇಡೀ ನಾಟಕ ಅಡೆತಡೆಯಿಲ್ಲದೆ ಓದಿಸಿಕೊಂಡು ಹೋಗುತ್ತದೆ. ನಾಟಕದ ಕೇಂದ್ರ ಸತ್ಯ 'ಮಾನವ ಸಮಾನತೆಯ' ಸಂದೇಶ ನೀಡುವುದಾಗಿದೆ. ಪ್ರಯೋಗಿಸಲು ತುಂಬಾ ಸೂಕ್ತವಾಗಿದೆ. ಅಕ್ಕಮಹಾದೇವಿ ಸಂದರ್ಭದಲ್ಲಿ ವಚನಗಳನ್ನು ವಿಶೇಷವಾಗಿ ಬಳಸಲಾಗಿದೆ. ಉಳಿದೆಡೆಯಲ್ಲಿಯೂ ವಚನಗಳಿಗೆ ಹೆಚ್ಚು ಪ್ರಾಧಾನ್ಯ ಇರಬೇಕಾಗಿತ್ತು ಅನಿಸುತ್ತದೆ. ಹಾಗಿದ್ದರೂ ತಾತ್ವಿಕ ದೃಷ್ಟಿಯಿಂದ ಇದು ಉತ್ತಮ ನಾಟಕವೇ. ಡಾ. ಬಸವಪ್ರಭು ಪಾಟೀಲರ ಪ್ರಯತ್ನ ಮೆಚ್ಚಿಕೊಳ್ಳುವಂತಹದು.
©2025 Book Brahma Private Limited.