ಸಾಯೋ ಆಟ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 64

₹ 50.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ದ.ರಾ.ಬೇಂದ್ರೆಯವರು ’ಸಾಯೋ ಆಟ’ ಎಂಬ ನಾಟಕವನ್ನು1952 ರಲ್ಲಿ ರಚಿಸಿದರು. ಬೇಂದ್ರೆಯವರ ಮೂರನೆಯ ನಾಟಕ. 33 ಪುಟಗಳ ಈ ನಾಟಕದಲ್ಲಿ ನಾಲ್ಕು ಪ್ರವೇಶಗಳಿವೆ ’ನಮನ’ ಕವನ ಸಂಕಲನ ಹದಿನಾರನೆ ಪದ್ಯವನ್ನುನಾಟಕದ ಪ್ರಾರಂಭದಲ್ಲಿ ಸೇರಿಸಿದ್ದಾರೆ. ಈ ನಾಟಕದ ವಸ್ತು ಮತ್ತು ಉದ್ದೇಶ ’ಸಾವು’. ಸೂತ್ರದಾರನು ಮೃತ್ಯುದೇವತೆಯ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. 'ಸಾಯೋ ಆಟ'ವು ಬೇಂದ್ರೆಯವರಿಗೆ ವಿಮರ್ಶಕರ ಮೆಚ್ಚುಗೆ ಗಳಿಸಿಕೊಟ್ಟ ಕೃತಿ. ’ಸಾಯೋ ಆಟ’ ನಾಟಕವು ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದವಾಗಿದೆ. ಈ ಹಾಸ್ಯ ಪ್ರಹಸನವನ್ನು ಬೇಂದ್ರೆಯವರು ಮರಾಠಿಯಲ್ಲಿ ಬರೆದು ನಂತರ ಕನ್ನಡೀಕರಿಸಿದ್ದಾರೆ. ಮರಾಠಿಯ ಜನಪದ ಕಥೆಗಳಲ್ಲಿ 'ಸಾಯೋಆಟ'ದ ಕಥೆ ಪ್ರಚಲಿತ. ಹಿಂದಿಯಲ್ಲಿ 'ಭರತೇಯ ಹರಿಶ್ಚಂದ್ರ' ಅವರ 'ಅಂಧೀನಗರಿ ಚೌಪಟ್ ರಾಜ' ಎಂಬ ಮಕ್ಕಳ ನಾಟಕವೂ ಇದೇ ಮಾದರಿಯದು. ಹಾಸ್ಯ ಪ್ರಧಾನ ನಾಟಕದಲ್ಲಿ ಮಾತಿನ ಚಮತ್ಕಾರ, ವ್ಯಂಗ್ಯ, ವಿಡಂಬನೆ ಕಾಣಬಹುದು.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books