ಸಿನಿಮಾ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ವಲಸೆ ಹಕ್ಕಿಯ ಹಾಡು ಕಾದಂಬರಿ ಆಧಾರಿತವಾಗಿಟ್ಟುಕೊಂಡು ರಚಿಸಿರುವ ನಾಟಕ ’ಇಗೋ ಪಂಜರ, ಅಗೋ ಮುಗಿಲು.’
ಅನುವಾದಕ, ಲೇಖಕರಾದ ಎಲ್.ಎನ್ ಮುಕುಂದರಾಜ್ ಅವರ ಈ ನಾಟಕ ರಚನೆಯಲ್ಲಿ ಸರಳತೆ, ನೈತಿಕ ನ್ಯಾಯದೃಷ್ಠಿ, ಹಳ್ಳಿಯೊಂದರ ಸಾಮಾಜಿಕ, ಆರ್ಥಿಕ ಸಂರಚನೆಯ ಪತನದೊಂದಿಗೆ ಇತಿಹಾಸ ಹಿಡಿದ ವಕ್ರಗತಿಯನ್ನು ದಾಖಲಿಸುತ್ತಾರೆ. ಜಾಗತಿಕ ಕ್ಷೋಭೆಗಳೂ ಕೂಡ ದೂರದ ಹಳ್ಳಿಯೊಂದರ ಮನುಷ್ಯ ಸಂಬಂಧಗಳ ವಿಷಮತೆಗೆ ಹೇಗೆ ಪರೋಕ್ಷವಾಗಬಹುದು ಎಂಬ ಅಂಶವನ್ನು ಈ ನಾಟಕದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.
©2024 Book Brahma Private Limited.