ಭಾರತ ಯಾತ್ರೆ

Author : ಕೆ.ವಿ. ಅಕ್ಷರ

Pages 88

₹ 70.00




Year of Publication: 2013
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ನಾಟಕದ ಒಂದು ವಿಶಿಷ್ಟ ಪದಪ್ರಯೋಗ. ಆಚಾರ್ಯ ಶಂಕರ ಮತ್ತು ಅಂಥವರು ಇಂಥ ಯಾತ್ರೆ ಮಾಡುತ್ತಾ ಹೊರಟು ಭಾರತ ನೋಡಿದರು. ಅದು ಕೇವಲ ಭಾರತ ನೋಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಯಾತ್ರೆಯ ಮೂಲಕ ವಿವಿಧ ಬಗೆಬಗೆಯ ಜೀವಿಗಳು ಸಂಪರ್ಕವೇ ಇಲ್ಲದೆ ಬದುಕುತಿರುವ ಈ ನೆಲಕ್ಕೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭೂಮಿಗೆ ಭಾರತ ಅನ್ನುವ ಹೆಸರು ಕೊಟ್ಟರು. ಆದ್ದರಿಂದಲೇ ಭಾರತಯಾತ್ರೆ ಅಂದರೆ ಅದು ಭಾರತವನ್ನು ಕಾಣುವ ಯಾತ್ರೆ ಮಾತ್ರವಲ್ಲ; ಭಾರತವನ್ನು ಕಟ್ಟುವ ಯಾತ್ರೆಯೂ ಹೌದು. ಇದು ನಮ್ಮ ಭಾರತಯಾತ್ರೆಯೂ ಹೌದು; ಭಾರತವೇ ಸ್ವತಃ ನಡೆಸುತ್ತಿರುವ ಯಾತ್ರೆಯೂ ಹೌದು.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books