ರಂಗಕರ್ಮಿ ಪ್ರಸನ್ನ ಅವರು ರಚಿಸಿರುವ ಕೃತಿ ’ಮೂಲ ರಾಮಾಯಣ ಭಾಗ ಒಂದು’. ಪ್ರಕೃತಿ ಹಾಗೂ ಪುರುಷ ತತ್ವಗಳು ಪ್ರೀತಿ ಪೂರ್ವಕ ಸಹಬಾಳ್ವೆ ನಡೆಸಬೇಕು. ಇವುಗಳ ನಡುವಿನ ಸಭ್ಯ ಬದುಕು ಎಂಬ ತಿಳುವಳಿಕೆ ರಾಮಾಯಣದ ನೆಲೆಗಟ್ಟಾಗಿದೆ. ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ಬರೆದ ಕೃತಿಯಿದು. ಈ ಕೃತಿಯು ಬಾಲಕಾಂಡ ಹಾಗೂ ಅಯೋಧ್ಯಾ ಕಾಂಡಗಳನ್ನು ಒಳಗೊಂಡಿರುವ ಮೊದಲ ಭಾಗವನ್ನು ಓದುಗರ ಮುಂದಿಟ್ಟಿದೆ.
ಪ್ರಕೃತಿ ಹಾಗೂ ಪುರುಷ ಸಮತೋಲನವನ್ನು ಕಾಪಾಡುವುದು ಈಗಿನ ಹವಾಮಾನ ವೈಪರೀತ್ಯದ ಸನ್ನಿವೇಶದ ಅಗತ್ಯ ಎಂಬ ಅಂಶ ಈ ಕೃತಿಯಲ್ಲಿ ಮುಖ್ಯವಾಗಿದೆ. ಈ ಕೃತಿಯಲ್ಲಿ ಬರುವ ಚಿತ್ರಗಳನ್ನು ಸ್ವತಃ ಲೇಖಕರಾದ ಪ್ರಸನ್ನ ಅವರೇ ಬಿಡಿಸಿರುವುದು ವಿಶೇಷವಾಗಿದೆ.
©2024 Book Brahma Private Limited.