ರಾಮ- ಸೀತೆಯ ಮದುವೆ ವನವಾಸ ಸೀತಾ ಅಪಹರಣ ರಾವಣ ಹತ್ಯೆಗಳು ಇರುವ ರಾಮಾಯಣ ಎಲ್ಲರಿಗೂ ತಿಳಿದ ಸಂಗತಿ. ಇದೇ ರಾಮಾಯಣವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸಿದ್ದಾರೆ ಆಶಾ ರಘು ಅವರು. ಶಾಕುಂತಲ ನಾಟಕದಲ್ಲಿ ಉಂಗುರ ಪ್ರೇಮ ಸಂಕೇತವಾಗಿತ್ತು. ಅವರಿಬ್ಬರ ಪ್ರೀತಿಯನ್ನು ನೆನಪಿಸಿದ್ದು ಅದೇ ಉಂಗುರವೇ. ಇದೇ ಧಾಟಿಯಲ್ಲಿ ಲೇಖಕರು ಚೂಡಾಮಣಿಯನ್ನು ಕಥಾ ವಸ್ತುವನ್ನಿಟ್ಟುಕೊಂಡು ಕಥೆಯನ್ನು ಹೆಣೆದಿದ್ದಾರೆ. ಭಾರತದ ಪ್ರಾಚೀನ ಕಾವ್ಯ ವಸ್ತುಗಳನ್ನು ಹೊಸ ಕಾಲಘಟ್ಟದಲ್ಲಿ ಹೊಸದಾಗಿ ರೂಪಾಂತರಿಸುವ ಪ್ರಯತ್ನ ಈ ಹಿಂದೆಯೂ ನಡೆದಿದೆ. ಈ ಕೃತಿಯಲ್ಲಿ ಲೇಖಕರು ಪ್ರಾಚೀನ ಕಾವ್ಯತಂತ್ರಗಳನ್ನು ಹೊಸ ಕಾವ್ಯ ನಾಟಕಗಳಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದಾರೆ.
ಲೇಖಕಿ ಆಶಾ ರಘು ಅವರ ಚೂಡಾಮಣಿ ನಾಟಕದ ಸಂಕ್ಷಿಪ್ತ ಪರಿಚಯ
©2025 Book Brahma Private Limited.