ಶ್ಯಾಮನ ಅವ್ವ

Author : ಮಾಲತಿ ಮುದಕವಿ

Pages 288

₹ 290.00




Year of Publication: 2020
Published by: ಶೀತಲ ಮೆಹ್ತಾ
Address: ಅಜಬ್ ಪಬ್ಲಿಕೇಷನ್ಸ್, 7092, ಶ್ರೀ ಚೇಂಬರ್‍ಸ್, ಯೂನಿಯನ್ ಬ್ಯಾಂಕ್ ಎದುರು, ಅಶೋಕನಗರ, ನಿಪ್ಪಾಣಿ-59123

Synopsys

ಮಕ್ಕಳ ಮನಸ್ಸಿನ ಸ್ವರೂಪ ಕುರಿತು ಸಾನೆ ಗುರೂಜಿ ಅವರು ಬರೆದ ಮೂಲ ಮರಾಠಿ ನಾಟಕವನ್ನು ಲೇಖಕಿ ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹಳಷ್ಟು ಬಾರಿ ಮನುಷ್ಯನ ಹೃದಯವಂತಿಕೆ ಹಾಗೂ ಹಿರಿಮೆ ಅವನ ತಂದೆ-ತಾಯಿಯರನ್ನೇ ಅವಲಂಬಿಸಿರುತ್ತವೆ. ಅವನ ಮುಂದಿನ ಜೀವನದ ಒಳಿತು ಕೆಡುಕುಗಳು ಕೂಡಾ ತಂದೆ-ತಾಯಿಯರನ್ನೇ ಅವಲಂಬಿಸಿರುತ್ತವೆ. ಅವನ ಜೀವನದ ಒಳಿತು-ಕೆಡುಕುಗಳ ಅಡಿಪಾಯವೂ ಕೂಡಾ ಅವನ ಚಿಕ್ಕಂದಿನಲ್ಲಿಯೇ ಹಾಕಲ್ಪಡುತ್ತದೆ. ತೊಟ್ಟಿಲಿನಲ್ಲಿರುವಾಗ, ಅವ್ವನ ಮೈಮೇಲೆ, ಹೆಗಲ ಮೇಲೆ, ಮಡಿಲಲ್ಲಿ ಆಡುತ್ತಿರುವಾಗಲೇ ಭಾವೀ ಜೀವನದ ಬೀಜಾರೋಪಣ ವಾಗುತ್ತಲಿರುತ್ತದೆ..

ತಾಯಿ-ತಂದೆಯರು ಅರಿತೋ, ಅರಿಯದೆಯೋ ಮಕ್ಕಳಲ್ಲಿ ದೊಡ್ಡತನದ ಗುಣಗಳನ್ನೋ, ಸಣ್ಣತನದ ಗುಣಗಳನ್ನೋ ಬಿತ್ತುತ್ತಲೇ ಇರುತ್ತಾರೆ. ಮನುಷ್ಯನು ಜನಿಸುವುದಕ್ಕಿಂತ ಪೂರ್ವದಲ್ಲಿಯೇ ಅವನ ಶಿಕ್ಷಣವು ಪ್ರಾರಂಭವಾಗಿರುತ್ತದೆ.  ಅಕ್ಕ-ಪಕ್ಕದ ಇಡಿಯ ಜಗತ್ತು, ಸರ್ವ ಸಜೀವ-ನಿರ್ಜೀವ ಸೃಷ್ಟಿಯೂ ಕೂಡಾ ಒಂದಿಲ್ಲೊಂದು ರೀತಿಯಲ್ಲಿ ಮಗುವಿಗೆ ಶಿಕ್ಷಣವನ್ನು ಕೊಡುತ್ತಲೇ ಇರುತ್ತದೆ. ಆದರೆ, ಸುತ್ತಣ ಪ್ರಪಂಚದ ಸೃಷ್ಟಿಯಿಂದ ಏನು ಕಲಿಯಬೇಕು ಎನ್ನುವುದನ್ನು ಮಾತ್ರ ತಾಯಿ-ತಂದೆಯರೇ ಕಲಿಸುತ್ತಾರೆ. ಮಕ್ಕಳ ಶಿಕ್ಷಣದಲ್ಲಿ ಅತ್ಯಂತ ಹೆಚ್ಚಿನ ಪಾಲು ಮಾತ್ರ ತಾಯಿ-ತಂದೆಯರದೇ ಇರುತ್ತದೆ. ಎರಡು-ಮೂರು ತಿಂಗಳ ಮಗುವನ್ನು ಹೊರಗೆ ಅಂಗಳದಲ್ಲಿ ಮಲಗಿಸಿದರೆ, ಅದರ ಮನಸ್ಸಿನ ಮೇಲೆ ಹಸಿರು ಗಿಡಮರಗಳಿಂದಾಗಿ, ಅದರ ಶರೀರದ ಮೇಲೆ ಆ ಹಸಿರಿನ ಪರಿಣಾಮದಿಂದಾಗಿ ಅವರ ಮನಸ್ಸೂ ಹಸಿರಾಗುತ್ತದೆ ಎಂದು ಹೇಳುತ್ತಾರೆ. ಇದರರ್ಥವೆಂದರೆ ಮಕ್ಕಳ ಮನಸ್ಸು ಚಿಕ್ಕಂದಿನಲ್ಲಿ ಅತ್ಯಂತ ಸಂಸ್ಕಾರಕ್ಷಮತೆಯನ್ನು ಪಡೆದಂಥದಾಗಿರುತ್ತದೆ ಎಂಬುದು. ಇಂತಹ ಚಿಂತನೆಗಳ ನಾಟಕದ ಅನುವಾದ ಇಲ್ಲಿದೆ. 

 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books