ಶ್ರೀ ಕೃಷ್ಣ ಪಾರಿಜಾತ (ನಾಟಕ)

Author : ಬಸವರಾಜ ನಾಯ್ಕರ

Pages 230

₹ 180.00




Year of Publication: 2018
Published by: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
Address: ಗೊಟಗೋಡಿ-581197, (ತಾ: ಶಿಗ್ಗಾವಿ, ಜಿ: ಹಾವೇರಿ)
Phone: 08362255180

Synopsys

ಕನ್ನಡ ಜಾನಪದ ನಾಟಕಗಳ ಪೈಕಿ ‘ಶ್ರೀ ಕೃಷ್ಣ ಪಾರಿಜಾತ’ವೂ ಒಂದು. ಉತ್ತರ ಕರ್ನಾಟಕ ಮೂಲದ ಈ ನಾಟಕವು ತನ್ನದೇ ಆದ ಜಾನಪದ ಸೊಗಡಿನಿಂದ ಇಂದಿಗೂ ಕಂಗೊಳಿಸುತ್ತದೆ. ಪುರಾಣದ ಕಥೆಯನ್ನು ಹೊಂದಿರುವ ಈ ನಾಟಕವು ಶ್ರೀ ಕೃಷ್ಣ ಹಾಗೂ ಇಬ್ಬರು ಪತ್ನಿಯರಾದ ರುಕ್ಮಿಣಿ -ಸತ್ಯಭಾಮೆಯರನ್ನು ಕುರಿತಾಗಿದೆ. ನಾರದ ಮುನಿಯು ಸ್ವರ್ಗದಿಂದ ತಂದ ಪಾರಿಜಾತದ ಹೂವನ್ನು ಪಡೆದುಕೊಳ್ಳಲು ಈ ಇಬ್ಬರಲ್ಲಿಯ ಸವತಿ ಮತ್ಸರವು ನಾಟಕದ ಪ್ರಮುಖ ಅಂಶ. ಮೇಲ್ನೋಟಕ್ಕೆ ತುಂಬಾ ಸರಳ ಕಥಾ ಸಾಹಿತ್ಯ ಇದೆ ಎಂದುಕೊಂಡರೂ ಈ ನಾಟಕವು ಶ್ರೀಮಂತ ಸಂಭಾಷಣೆಯಿಂದ ಆಕರ್ಷಿಸುತ್ತದೆ ಮಾತ್ರವಲ್ಲ; ಮನುಷ್ಯನಲ್ಲಿಯ ಸಹಜ ಭಾವನೆ-ಸಂವೇಗಗಳ ಸ್ವಭಾವಗಳನ್ನುಜಾಗತಿಕವಾಗಿ ಪರಿಚಯಿಸುತ್ತದೆ. ಇಂತಹ ಸಹಜ ಸ್ವಭಾವದ ವರ್ತನೆಯ ಭಾವಗಳು ದೇವಾನುದೇವತೆಗಳಲ್ಲೂ ಕಾಣಬಹುದು ಎಂಬ ಅಂಶವನ್ನುಸ್ಪಷ್ಟಪಡಿಸುತ್ತದೆ. ನಾಟಕದ ಒಟ್ಟು ಪರಿಣಾಮ ಎಂದರೆ, ಸಹಜವಾದ ಹಾಸ್ಯ, ತಾತ್ವಿಕತೆ ಹಾಗೂ ಪ್ರಾದೇಶಿಕ ಸೊಗಡಿನ ಅನುಭವವನ್ನು ದಟ್ಟವಾಗಿಸುತ್ತದೆ. ಜಾನಪದ ಸಿರಿವಂತಿಕೆಯ ಈ ನಾಟಕವನ್ನು ಲೇಖಕ ಡಾ. ಬಸವರಾಜ ನಾಯ್ಕರ್ ಅವರು ಇಂಗ್ಲಿಷ್ ಸಾಹಿತ್ಯಕ್ಕೆ ಅನುವಾದಿಸಿದ್ದು, ಈ ನಾಟಕದ ಸಾಹಿತ್ಯ ಉತ್ಕೃಷ್ಟತೆಗೆ ಗರಿ ಮೂಡಿಸಿದ್ದಾರೆ. 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books