ಮಹಾವೀರರ ಜೀವನಾಧಾರಿತ ನಾಟಕವಿದು. ಗುಲಬರ್ಗಾ ಆಕಾಶವಾಣಿಯಿಂದ 4 ಬಾರಿ ಪ್ರಸಾರವಾಗಿದೆ. ಬಾಲ್ಯದಿಂದ ಬಿಹಾರದ ಪಾವುಪುರಿಯಲ್ಲಿ ಮುಕ್ತಿ ಹೊಂದುವವರೆಗೆ ಕೆಲವು ಮಹತ್ವದ ಪ್ರಸಂಗಗಳನ್ನು ನಾಟಕ ಒಳಗೊಂಡಿದೆ. ಜೀವಜಗತ್ತಿನಲ್ಲಿ ಮನುಷ್ಯ ಸಮಾನಭಾವದೊಂದಿಗೆ ಆತ್ಮಕಲ್ಯಾಣ ಕಾಣಬೇಕು ಹಾಗೂ ತಾನು ಬದುಕುವುದರೊಂದಿಗೆ ಇತರರಿಗೂ ಬದುಕಲು ಅವಕಾಶ ಕೊಡಬೇಕು ಎಂಬುದು ಇಲ್ಲಿಯ ಸಂದೇಶ. ಅಲೌಕಿಕವಾದ ಪರಿಕಲ್ಪನೆಗಳನ್ನು ತೀರಾ ಸರಳವಾಗಿ, ಅಷ್ಟೇ ಅರ್ಥಗರ್ಭಿತವಾಗಿ ಸಂಭಾಷಣೆ ಬರೆದಿದ್ದು ನಾಟಕದ ಆಕರ್ಷಣೆಯಾಗಿದೆ. ಸಾಹಿತಿ ಎಸ್. ಜೀತೇಂದ್ರಕುಮಾರ್ ಅವರು ಮುನ್ನುಡಿ ಬರೆದಿದ್ದು, 'ಇಲ್ಲಿಯ ಪ್ರತಿ ಸಂಭಾಷಣೆಯು ನಾಟಕೀಯವೆನಿಸದು. ಒಂದಾದ ನಂತರ ಒಂದು ಪ್ರಸಂಗಗಳನ್ನು ಹೆಣೆಯುವಲ್ಲಿಯೂ ಲೇಖಕರ ಸೂಕ್ಷ್ಮತೆ ಪ್ರಶಂಸನೀಯ’ ಎಂದಿದ್ದಾರೆ.
©2024 Book Brahma Private Limited.