ಕನ್ನಡ ಮೃಚ್ಛಕಟಿಕ

Author : ಕೆ.ಕೃಷ್ಣಮೂರ್ತಿ

Pages 200

₹ 180.00




Year of Publication: 2017
Published by: ಡಾ. ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ
Address: #22, ಚಿರಂತನ, 1ನೇ ಮುಖ್ಯರಸ್ತೆ, ಕೃಷ್ಣಮೂರ್ತಿ ಲೇಔಟ್, ಮೈಸೂರು-570009
Phone: 9448553797

Synopsys

ಕಾಳಿದಾಸನ ಶಾಕುಂತಲ ಹಾಗೂ ಭವಭೂತಿಯ ಉತ್ತರ ರಾಮಚರಿತೆ ಕೃತಿಗಳಂತೆಯೇ ಶೂದ್ರಕನ ಮೃಚ್ಛಕಟಿಕವೂ ಪ್ರಾಚೀನ ಭಾರತದ ನಾಟಕ ರತ್ನತ್ರಯಗಳಲ್ಲಿ ಪ್ರಮುಖ ಕೃತಿ.

ಒಂದೇ ಸಮನಾದ ಕಾಲದೇಶಾತೀತ ಮಹತ್ವ-ಮೋಹಕತ್ವಗಳನ್ನು ಪಡೆದ ಮತ್ತೊಂದು ಕೃತಿ ಸಂಸ್ಕೃತ ಸಾಹಿತ್ಯದಲ್ಲಿಯೇ ವಿರಳ. ಶಾಕುಂತಲ ನಾಟಕವು ಪದ್ಯಗದ್ಯಮಯವಾದ ನಾಟಕ. ಮೃಚ್ಛಕಟಿಕ ಹಾಗಲ್ಲ. ಇಲ್ಲಿ ಪದ್ಯಗಳಿವೆ. ಆದರೆ, ನಾಟಕ ಕ್ರಿಯೆಯನ್ನು ಮುಂದೆ ಸಾಗಿಸುವ ಗುರಿ ಅವಕ್ಕಿದೆ. ಶೈಲಿಯು ಗದ್ಯದಷ್ಟೇ ಸರಳವಾಗಿದೆ. ಅಷ್ಟೇ ಸರಳಗನ್ನಡದಲ್ಲಿ ಕೆ. ಕೃಷ್ಣಮೂರ್ತಿ ಅವರು ಸಂಸ್ಕೃತದಿಂದ ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿದ್ದಾರೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books