ಆಗಸ್ಟ್ ಸ್ಟ್ರಿಂಡ್ ಬರ್ಗ್ ಅವರ 'ಫಾದರ್' ನಾಟಕದ ಕನ್ನಡಾನುವಾದ. ಈ ಕೃತಿಯನ್ನು ಸಿ.ನಾಗಣ್ಣನವರು ಕನ್ನಡೀಕರಿಸಿದ್ದಾರೆ. ಸ್ಟ್ರಿಂಡ್ ಬರ್ಗ್ನ ’ಫಾದರ್’ ವಾಸ್ತವವಾದಿ ನಾಟಕಗಳ ಪೈಕಿ ಅತ್ಯಂತ ಮಹತ್ವದ ಮತ್ತು ಪ್ರಯೋಗಾತ್ಮಕವಾದ ನಾಟಕ. ಅಪಾರ ಪ್ರತಿಭಾವಂತನಾಗಿದ್ದ ಈ ನಾಟಕಕಾರ ತನ್ನ ಜೀವನದ ಕೆಲ ವೈಯಕ್ತಿಕ ಘಟನೆಗಳಿಗೆ ನುಡಿಯ ಉಡುಗೆ ತೊಡಿಸಿದ್ದಾನೆ. ’ಫಾದರ್’ ನಾಟಕಕಾರನ ವೈಯಕ್ತಿಕ ಘಟನೆಗಳನ್ನು ಒಳಗೊಳ್ಳುತ್ತಲೇ ಮನುಷ್ಯ ಜೀವನದ ವ್ಯಂಗ್ಯ, ಅನುಮಾನ, ಅಪನಂಬಿಕೆ, ಅಸಮಾಧಾನ ಸಂಬಂಧಗಳ ತೀಕ್ಷ್ಣತೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಸಮರ್ಥ ಅನುವಾದಕರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಸಿ.ನಾಗಣ್ಣ ಅವರು ಸಂಕೀರ್ಣವಾದ ಈ ನಾಟಕಗಳನ್ನು ಇದು ನಮ್ಮದೇ ನಾಟಕ ಎನ್ನುವಷ್ಟು ಸೊಗಸಾಗಿ ಕನ್ನಡದ ಸಂವೇದನೆಗಳಿಗೆ ತಕ್ಕಂತೆ ಅನುವಾದಿಸಿದ್ದಾರೆ.
©2024 Book Brahma Private Limited.