ಬೈಸಿಕಲ್ ಥೀವ್ಸ್

Author : ಕೆ.ವಿ. ಸುಬ್ಬಣ್ಣ

Pages 114

₹ 15.00




Year of Publication: 1979
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾಲೂಕು ಸಾಗರ, ಜಿಲ್ಲೆ: ಶಿವಮೊಗ್ಗ--577417

Synopsys

ವಿಟ್ಟೋರಿಯೋ ಡಿ ಸಿಕಾ ಅವರ ಇಟಾಲಿಯನ್ ಚಲಚಿತ್ರದ ಕಥೆ ‘ಬೈಸಿಕಲ್ ಥೀವ್ಸ್ ’ ಅನ್ನು ಕೆ.ವಿ. ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು 1987ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ವಿಶ್ವ ಚಲನಚಿತ್ರ ಇತಿಹಾಸದಲ್ಲೇ ಬೈಸಿಕಲ್ ಥೀವ್ಸ್ ತನ್ನ ಅಚ್ಚಳಿಯದ ಸ್ಥಾನ ಉಳಿಸಿಕೊಂಡಿದೆ. ನಿಯೋ ರಿಯಾಲಿಸ್ಟ್ ಪಂಥದ ಚಿತ್ರಗಳಿಗೆ ಇದು ಉತ್ತಮ ಮಾದರಿಯಾಗಿದೆ.

ಜಾಗತಿಕ ಎರಡನೇ ಮಹಾಯುದ್ಧ ಮುಗಿದ ನಂತರದ ದಿನಗಳಲ್ಲಿ ಜನರಿಗೆ ಉದ್ಯೋಗವಿರಲಿಲ್ಲ. ಆ ಪೈಕಿ, ಅಂಟೋನಿಯೋ, ಆತನ ಪತ್ನಿ ಹಾಗೂ ಇಬ್ಬರ ಮಕ್ಕಳು ಪಡುವ ಯಾತನೆ ಚಿತ್ರದ ಮೂಲ ಜೀವಾಳ. ಪೋಸ್ಟರ್ಗಳನ್ನು ಅಂಟಿಸುವ ಕೆಲಸ ಪಡೆಯುತ್ತಾನೆ. ಆದರೆ, ಅದಕ್ಕೆ ಬೈಸಿಕಲ್ ಅಗತ್ಯವಿತ್ತು. ಬೈಸಿಕಲ್ ಅಡವಿಟ್ಟಿದ್ದನ್ನು ಬಿಡಿಸಿ ತರುತ್ತಾನೆ. ಮುಂದೆ ಈ ಬೈಸಿಕಲ್ ತನ್ನ ಕಣ್ಣೆದರಲ್ಲೇ ಕಳ್ಳರು ಕದ್ದೊಯ್ಯುತ್ತಾರೆ. ಕೆಲಸವಿಲ್ಲದೇ ಮತ್ತೆ ಅಲೆದಾಟ. ಪತ್ನಿ-ಮಕ್ಕಳು ಉಪವಾಸ. ಅವರನ್ನು ಸಾಕುವುದಕ್ಕಾಗಿ ಬೈಸಿಕಲ್ ನ್ನು ಕಳವು ಮಾಡುತ್ತಾನೆ. ಆದರೆ, ಸಿಕ್ಕು ಬಿದ್ದು ಮಗನ ಎದುರೇ ಅಪಮಾನಕ್ಕೆ ಒಳಗಾಗುತ್ತಾನೆ. ಯುದ್ಧಾನಂತರದ ದಿನಗಳಲ್ಲಿ ಜನರು ಮಾನವೀಯತೆಯನ್ನು ಅನಿವಾರ್ಯವಾಗಿ ಬಲಿ ಕೊಡುವ ಸ್ಥಿತಿ ಉದ್ಭವಿಸಿದ್ದು, ಅದರ ದಾರುಣ ಚಿತ್ರಣವನ್ನು ಈ ಕಥೆ ಕಟ್ಟಿಕೊಡುತ್ತದೆ. 

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books