ಸಂಸ್ಕೃತ ಕವಿಗಳ ಪೈಕಿ ಕಾಳಿದಾಸನ ನಂತರದ ಕವಿ ಎಂದರೆ ಭಾಸ. ಸ್ವಪ್ನ ವಾಸವದತ್ತ ಸೇರಿದಂತೆ ಇತರೆ ಆತನ ನಾಟಕಗಳು ಸಂಸ್ಕೃತ ಸಾಹಿತ್ಯ ಮಾತ್ರವಲ್ಲ ಕನ್ನಡ ಸಾಹಿತ್ಯದಲ್ಲೂ ಚಿರಸ್ಥಾಯಿಯಾಗಿ ಉಳಿದಿವೆ. ಪ್ರತಿಜ್ಞಾ ಯೌಗಂಧರಾಯಣ ಎಂಬುದು ಭಾಸ ಕವಿಯ ನಾಟಕ. ಕೃತಿಯಲ್ಲಿ ಭಾಸ ಅರಿತಿದ್ದ ಬೃಹತ್ಕಥೆಯ ಸಾರ ಯಾವುದು?, ಕಥಾಸಾರಾಂಶ, ಪ್ರತಿಜ್ಞಾ ಯೌಗಂಧರಾಯಣ ನಾಟಕ ಹಾಗೂ ಟಿಪ್ಪಣಿಗಳು ನೀಡಿದ್ದು ಓದುಗರಿಗೆ ಅನುಕೂಲವಾಗಿವೆ.
ಪ್ರತಿಜ್ಞಾ ಯೌಗಂಧರಾಯಣದಲ್ಲಿ ವತ್ಸರಾಜನು ವಾಸವದತ್ತೆಯನ್ನು ಮದುವೆಯಾಗುತ್ತಾನೆ. ವಾಸವದತ್ತೆಯ ಅಪಹರಣವಾಗುತ್ತದೆ. ಇದೇ ವಸ್ತುವಾದರೂ ಸೆರೆಯಲ್ಲಿರುವ ವತ್ಸರಾಜನನ್ನು ಬಿಡಿಸಿಕೊಂಡು ಬರುವ ಮಂತ್ರಿ ಯೌಗಂಧರಾಯಣನ ಚಾಕಚಕ್ಯತೆಯು ನಾಟಕದ ವಸ್ತುವಾಗುತ್ತದೆ.
©2024 Book Brahma Private Limited.