ಅಂಧೇರ ನಗರಿ ಮತ್ತು ಕುರುಡರ ಆನೆ

Author : ಕಾಶೀನಾಥ ಅಂಬಲಗೆ

Pages 76




Year of Publication: 2012
Published by: ಕನ್ನಡನಾಡು ಪ್ರಕಾಶನ
Address: ಕನ್ನಡ ನಾಡು ಲೇಖಕರ ಮಾತು ಓದುಗರ ಸಹಕಾರ ಸಂಘ ನಿಯಮಿತ ಗುಲಬರ್ಗಾ

Synopsys

ಹಿಂದಿಯ ಎರಡು ಪ್ರಸಿದ್ಧ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರೊ. ಕಾಶಿನಾಥ ಅಂಬಲಗೆ. ಮೊದಲನೆಯದು ಹಿಂದಿಯ ಪ್ರಸಿದ್ಧ ಸಾಹಿತಿ ಭರತೇಂದು ಹರಿಶ್ಚಂದ್ರರ ಮೂಲ ಕೃತಿಯನ್ನು ಆಧರಿಸಿದ 'ಅಂಧೇರ ನಗರಿ'. ನಾಟಕದಲ್ಲಿ ವರ್ತಮಾನದ ಆಡಳಿತ ವ್ಯವಸ್ಥೆಯ ಆಡಳಿತ ವ್ಯವಸ್ಥೆಯ ಅಣಕವಿದೆ. ಇದೊಂದು ಬಗೆಯ ರಾಜಕೀಯ ಪ್ರಹಸನ.

ಹಿಂದಿ ನಾಟಕಾರ ಶರದ್‌ಜೋಶಿ ಅವರ ನಾಟಕ 'ಕುರುಡರ ಆನೆ'. ಅಭಿವೃದ್ಧಿ ಯೋಜನೆಗಳ ಕಪಟತೆ, ಕುಟಿಲತೆಗಳನ್ನು ನಾಟಕ ವಿವರಿಸುತ್ತದೆ. ಕಾರ್ಯಾಂಗದ ಕುರುಡು ಯೋಜನೆಗಳ ಬಗ್ಗೆ ಗಮನ ಸೆಳೆಯುತ್ತವೆ. ಅನುವಾದವೇ ಆದರೂ ಕನ್ನಡದ ಮಣ್ಣಿನ ಗುಣಕ್ಕೆ ನಾಟಕಗಳನ್ನು ಹೊಂದಿಸಿದ್ದಾರೆ ಅಂಬಲಗೆ. ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕ ಭಾಗದ ಯೋಜನೆಗಳು ಮುಟ್ಟಲಿರುವ ದುರಂತ ಸ್ಥಿತಿಯನ್ನು ನಾಟಕ ಮನವರಿಕೆ ಮಾಡಿಕೊಡುತ್ತದೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books