ಅಭಿನವ ಬೃಹನ್ನಳಾ ವಿಳಾಸ

Author : ನಟರಾಜ್ ಹೊನ್ನವಳ್ಳಿ

Pages 89

₹ 120.00




Year of Publication: 2020
Published by: ವಿಸ್ರೇಡ್ ಬುಕ್ಸ್
Address: ತುಮಕೂರು- 572102

Synopsys

ಡಾ. ಶಂಕರ ಮೊಕಾಶಿ ಪುಣೇಕರ ಅವರ ನಟನಾರಾಯಣಿ ಕಾದಂಬರಿ ಆಧಾರಿತ ನಾಟಕ ‘ಅಭಿನವ ಬೃಹನ್ನಳಾ ವಿಳಾಸ’. ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಮತ್ತು ಎಚ್.ವಿ. ವೇಣುಗೋಪಾಲ್ ಅವರು ಕಾದಂಬರಿಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ. ಡಾ. ಶಂಕರ ಮೊಕಾಶಿ ಪುಣೇಕರ ಅವರು ಕನ್ನಡ ಸಾಹಿತ್ಯದ ಬಹಳ ಮುಖ್ಯ ಕಾದಂಬರಿಕಾರರು ಮತ್ತು ಬಹುಮುಖೀ ವ್ಯಕ್ತಿತ್ವದ ಸಾಹಿತಿಗಳು. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿಯ ಬಹುದೊಡ್ಡ ವಿದ್ವಾಂಸರು. ಇಂಗ್ಲಿಷ್ ಮತ್ತು ಕನ್ನಡ-ಕೃತಿಗಳನ್ನು ರಚಿಸಿದ್ದಾರೆ. ಪುಣೇಕರರ ವಿಮರ್ಶೆ ಮತ್ತು ಸಂಗೀತದ ಮೇಲಿನ ಬರಹಗಳು ಕೂಡ ಬಹಳ ಮುಖ್ಯವಾದವು. ಆ ಪೈಕಿ ನಟ ನಾರಾಯಣಿ ಕಾದಂಬರಿ ಪ್ರಮುಖ ಸ್ಥಾನ ಪಡೆದಿದೆ ಎಂದು ರೂಪಾಂತರಕಾರರು ಅಭಿಪ್ರಾಯಪಟ್ಟಿದ್ದಾರೆ.

About the Author

ನಟರಾಜ್ ಹೊನ್ನವಳ್ಳಿ

ಖ್ಯಾತ ರಂಗ ನಿರ್ದೇಶಕ, ನಾಟಕಕಾರ ನಟರಾಜ್ ಹೊನ್ನವಳ್ಳಿ ಅವರು ರಂಗಭೂಮಿಯಲ್ಲಿ ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ್ದಾರೆ. ಇವರ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ವಿಶ್ವ ರಂಗಭೂಮಿ ದಿಗ್ಗಜರಾದ ಬ್ರೆಕ್ ಹಾಗೂ ಚಾಕೊ ಮತ್ತಿತರರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶ್ ಅವರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ, ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿಗಳನ್ನು ರಂಗರೂಪಕ್ಕೆ ತಂದಿದ್ದಾರೆ. ನಲವತ್ತು ನಾಟಕ, ನಲವತ್ತು ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಕನ್ನಡದ ಸಣ್ಣ ಕಥೆಗಳನ್ನು ರಂಗಕ್ಕೆ ತಂದ ಯಶಸ್ವಿ ನಿರ್ದೇಶಕರೆನಿಸಿಕೊಂಡಿದ್ದಾರೆ. ನೀನಾಸಂ ರಂಗಶಿಕ್ಷಣದ ...

READ MORE

Related Books