ತಿರುಕರ ಪಿಡುಗು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 32

₹ 30.00




Year of Publication: 2008
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ ಎರಡನೆಯ ನಾಟಕ ’ತಿರುಕರ ಪಿಡುಗು’ (1924). ಇದೊಂದು ಏಕಾಂಕ ನಾಟಕ. 23 ಪುಟಗಳಲ್ಲಿ ಹರಡಿರುವ ಈ ನಾಟಕದಲ್ಲಿ ಬೇಂದ್ರೆಯವರು 'ಸಖೀಗೀತ' ಕವನ ಸಂಗ್ರಹದಲ್ಲಿನ 'ತಿರುಕ' ಕವನವನ್ನು ಸೇರಿಸಿದ್ದಾರೆ. ನಾಟಕವು ಸೂತ್ರಧಾರನ ಪ್ರವೇಶದಿಂದ ಆರಂಭವಾಗುತ್ತದೆ ಹಾಗೂ ಕೊನೆಗೊಳ್ಳುತ್ತದೆ. ನಾಟಕದ ಕೊನೆಯಲ್ಲಿ ಬೇಂದ್ರೆಯವರು ಬಡವ-ಶ್ರೀಮಂತರ ನಡುವಿನ ಅಂತರವನ್ನು ಸೂಚಿಸುತ್ತಾರೆ. ಬೇಂದ್ರೆಯವರು ಈ ನಾಟಕದ ಆಶಯ ಬಗ್ಗೆ ’ಶ್ರೀಮಂತರು ಹೃದಯ ಶ್ರೀಮಂತರಾಗಬೇಕು ಮತ್ತು ತಿರುಕರ ತಿರುಕುತನ ಹೋಗಿ ಅವರು ಉದ್ಯೋಗ ಪ್ರಿಯರಾಗಬೇಕು’ ಎಂದಿದ್ದಾರೆ. ತಿರುಕರ ಪಿಡುಗು ’1924ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ. ಎಂ. ಶ್ರೀಕಂಠಯ್ಯನವರ ಸಮ್ಮುಖದಲ್ಲಿ ನಾಟಕದ ಪ್ರಥಮ ವಾಚನ’ ಮಾಡಿರುವುದನ್ನು ಬೇಂದ್ರೆಯವರೇ ಪ್ರಸ್ತಾಪಿಸಿದ್ದಾರೆ. ತಿರುಕರ ಪಿಡುಗು ಒಂದು ಶಾಶ್ವತ ಸಮಸ್ಯೆ. ತಿರುಕರಲ್ಲಿ ಅನೇಕ ಪ್ರಕಾರ. ಧರ್ಮಕ್ಕಾಗಿ, ದೇವರಿಗಾಗಿ, ದೇಶದ ಹೆಸರಿನಲ್ಲಿ ಬೇಡಿ ತಿನ್ನುವವರಿದ್ದಾರೆ. ಬಡತನದಿಂದಾಗಿ ಕೂಡ ತಿರುಕತನ ಸಮಾಜದಲ್ಲಿದೆ. ’ದಾನದಿಂದ ಜನಾಂಗ ಬಡವಾಗುತ್ತದೆ ಮತ್ತು ದುಡಿತದಿಂದ ದೇಶದ ಸಮೃದ್ಧಿ ಬೆಳೆಯುತ್ತದೆ ಎಂಬುದು ಈ ನಾಟಕಕಾರರ ದರ್ಶನ, ಅನ್ನದಾನ ಭಿಕ್ಷೆಯಾಗಬಾರದು ಅನ್ನ ದುಡಿತದ ಮಾನವಾಗಿ, ಗೌರವಪೂರ್ವಕವಾಗಿ ಎಲ್ಲರಿಗೂ ದೊರಕಬೇಕು ಎಂದು ಈ ನಾಟಕದ ಅಪೇಕ್ಷೆ' ಎಂದು ವಾಮನ ಬೇಂದ್ರೆ ಅಭಿಪ್ರಾಯಪಟ್ಟಿದ್ದಾರೆ. 'ತಿರುಕರ ಪಿಡುಗು' ನಾಟಕವು ತಿರಿದು ತಿನ್ನುವವರು ಹಾಗೂ ಬಹುಕೃತ ವೇಷಧಾರಿಗಳ ಟೀಕೆ ಮಾಡುತ್ತದೆ. ’ಈ ಉದ್ದೇಶ 'ಗೋಲ್'ನಲ್ಲಿಯಂತೆ ನೇರವಾಗಿ ಅಭಿವ್ಯಕ್ತವಾಗದೆ ಉಚ್ಚಮಟ್ಟದ ನಾಟಕೀಯತೆಯ ಮೂಲಕ ಪ್ರಕಟವಾಗುವುದು ಈ ಏಕಾಂಕದ ಸಾಧನೆ. ಗೋಲ್‌ನ ನಾಯಕ ತತ್ವಜ್ಞಾನಿ, ಧ್ಯೇಯವಾದಿಯಾದರೆ 'ತಿರುಕರ ಪಿಡುಗಿನ' ನಾಯಕ ಒಬ್ಬ ಹಾಸ್ಯಗಾರ. ಆ ಕಾಲದ ವಿದ್ಯಾವಂತರಲ್ಲಿ ಕೆಲವರು ತಮ್ಮ ಸಮಾಜದಿಂದ ಎಷ್ಟು ದೂರ ಹೋಗಿದ್ದರೆನ್ನುವುದಕ್ಕೆ ಆತ ಒಳ್ಳೆಯ ನಿರ್ದಶನವಾಗಿದ್ದಾನೆ. ಸಮಾಜದ ದುಃಖಿತರ ಬಗ್ಗೆ ಅವನಲ್ಲಿ ತಿರಸ್ಕಾರವಿದೆಯೇ ಹೊರತು ಕನಿಕರವಲ್ಲ' ಎಂದು ಜಿ. ಎಸ್. ಅಮೂರ ಅವರು ’ಭುವನದ ಭಾಗ್ಯ’ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books