ಸಹ್ಯಾದ್ರಿಕಾಂಡ

Author : ಕೆ.ವಿ. ಅಕ್ಷರ

Pages 96

₹ 65.00




Year of Publication: 1997
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಸಹ್ಯಾದ್ರಿ ಖಂಡದ ಈ ಆಗರ್ಭ ಜೀವಜಗತ್ತಿನ ಬ್ರಹ್ಮಾಂಡದೊಳಕ್ಕೆ ನಾಗರಿಕ ಜಗತ್ತಿನ ರಸ್ತೆಯ ಪ್ರವೇಶ ಆಗಿದ್ದು ಈಗ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದೆ. ಮೊದಲು ಮಾರಿಪೇಟಿಗೆ ಲಾರಿ ಬಂತು. ಕೊಡಲಿಯ ಬದಲು ಗರಗಸ ಬಂತು. ಆಮೇಲೆ ಅಣೆಕಟ್ಟು ಬಂತು. ವಿದ್ಯುತ್ ಬಮ್ತು, ಬುಲ್‌ಡೋಜರ್ ಬಂತು. ಪ್ರಗತಿಯ ಕುದುರೆಯ ಈ ನಾಗಾಲೋಟನ ಈಚಿನ ಹೆಜ್ಜೆ ಅಂತಂದರೆ, ಒಂದು ಅಣುವಿದ್ಯುತ್ ಕೇಂದ್ರ. ಒಂದು ಕಡೆಗೆ ಕುವೆಂಪು ಹಾಡು, ಇನ್ನೊಂದು ಕಡೆಗೆ ಅಣುವಿದ್ಯುತ್ ಕೇಂದ್ರ; ಒಂದು ಕಡೆಗೆ ಸೆಟೆದು ನಿಂತಿರೋ ಚಳುವಳಿಗಾರರು, ಇನ್ನೊಂದು ಕಡೆಗೆ ಇದನ್ನು ತಲೆಗೇ ಹಚ್ಚಿಕೊಳ್ಳದ ಕೂಲಿಕಾರರು; ಒಂದು ಕಡೆಗೆ ವಿದ್ಯುತ್ ಕ್ಷಾಮ, ಇನ್ನೊಂದು ಕಡೆಗೆ ಆಟಂಬಾಂಬು... ಇಂಥವರ ಮಧ್ಯೆ ಆಗಬಾರದ್ದು ಆಗಿ ಹೋಯಿತು. ಸಹ್ಯಾದ್ರಿ ಖಂಡದ ಸ್ಥಳ ಪುರಾಣಗಳ ಗೋಜಲಿನೊಳಕ್ಕೆ ಇನ್ನೊಂದು ಉಪಕಥೆ ಸೇರಿಹೋಯಿತು. ಈಗ ನಾಲ್ಕು ದಿನಗಳ ಕೆಳಗೆ ಆ ಅಣುವಿದ್ಯುತ್ ಕೇಂದ್ರದಲ್ಲಿ ಒಂದು ಸ್ಫೋಟ ಆಯಿತು. ಇಲ್ಲಿಂದ ನಮ್ಮ ಕಥೆ ಪ್ರಾರಂಭ. ಹಿಂದೆ ಹೇಳಿದ್ದೆಲ್ಲ ಒಂದು ರೀತಿಯ ಪುರಾಣ. ಮುಂದಿನದು ಇನ್ನೊಂದು ರೀತಿಯ ಪುರಾಣ. ಹಿಂದಿನದು ಸಹ್ಯಾದ್ರಿ ಖಂಡ... ಮುಂದಿನದು ಸಹ್ಯಾದ್ರಿ ಕಾಂಡ ಎನ್ನುವ ನಾಟಕ ರಚನೆಯಾಗಿದೆ. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books