ಕವಿ, ಚಿಂತಕ ಕೆ.ವೈ. ನಾರಾಯಣಸ್ವಾಮಿ ಅವರು ನಾಟಕಕಾರರು. ಅವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಪ್ರಯೋಗಗಳೊಂದಿಗೆ ತನ್ನದೆಯಾದ ಹೊಸ ಗಡಿಗಳನ್ನು ಶೋಧಿಸುತ್ತವೆ.
“ನ್ಯಾಸ್ತನೆ ನೆಲಬಾಲನೆ”ಯಲ್ಲಿ ಚಕ್ರರತ್ನ, ಅನಭಿಜ್ಞ ಶಕುಂತಲ, ಪಂಪಭಾರತ, ಕೈವಾರ ನಾರೇಯಣ, ವಿನುರ ವೇಮನ ಈ ನಾಟಕಗಳ ಸಂಗ್ರಹವಾಗಿದೆ. ಸಮಕಾಲೀನ ಸಂದರ್ಭದ ನೆಲೆಯಲ್ಲಿ ಜಾಗತಿಕ ರಾಜಕಾರಣವನ್ನು ದೇಸೀಯ ವಿದ್ಯಮಾನಗಳನ್ನು ಮುಖಾಮುಖಿಯಾದಂತೆ ರಚಿಸಿದ್ದಾರೆ.
ಪುರಾಣಕ್ಕೆ ಸಂಬಂಧಿಸಿದ ವಸ್ತುವಿನ ಜೊತೆಗೆ ಚಾರಿತ್ರಿಕ ಸಂದರ್ಭದ ಹಲವು ವ್ಯಕ್ತಿಗಳನ್ನು, ಸಂಗತಿಗಳನ್ನು, ನಾಟಕಕ್ಕೆ ವಸ್ತುವಾಗಿ ಬಳಸಿಕೊಂಡು, ಹೊಸ ದೃಷ್ಟಿಕೋನದ ಹೊಳಹನ್ನು ನೀಡಿರುವುದು ಈ ನಾಟಕ ಕೃತಿಯ ವೈಶಿಷ್ಟ್ಯ.
©2024 Book Brahma Private Limited.