ಈ ನಾಟಕವು ಫ್ರಾನ್ಸಿನ ಕಥೆಯೇ ಆಗಿದ್ದರೂ ಸಾರ್ವಕಾಲಿಕವೂ ಹೌದು. ಈ ನಾಟಕ ಪ್ರಾಯಶಃ ಇವತ್ತಿನ ಭಾರತದ ಸಂದರ್ಭಕ್ಕೆ ತದ್ವತ್ತಾಗಿ ಅನ್ವಯವಾಗಬಹುದಾದ ಒಂದು ರೂಪಕ. ಇಡೀ ಭಾರತವೇ ‘ಜಂಟಲ್ಮನ್’ ಆಗಲಿಕ್ಕೆ ಹೊರಟಿರುವ; ಮೂರ್ಖರಾಗುತ್ತಲೇ ಕಲಿಕೆಯ ಭ್ರಮೆಯನ್ನೂ ಬೆಳೆಸಿ ಕೊಳ್ಳುತ್ತಿರುವ; ಶ್ರೀಮಂತಿಕೆಯ ಸೋಗಿನಲ್ಲಿ ಇದ್ದದ್ದನ್ನೆಲ ಕಳೆದುಕೊಂಡು ಪಾಪರಾಗುತ್ತಿರುವ ಇವತ್ತಿನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ‘ಮಾಮಾಮೋಶಿ’ ಒಂದು ಕನ್ನಡಿಯೆಂಬಂತಿದೆ. ಚಾರ್ಲಿ ಚಾಪ್ಲಿನ್ನನ ಚಲನಚಿತ್ರಗಳ ಹಾಗೆಯೇ ಮೋಲಿಯೇರನ ನಾಟಕಗಳೂ ಕೂಡಾ ಯಾವುದೇ ದೇಶ ಯಾವುದೇ ಕಾಲದಲ್ಲೂ ಒಂದಲ್ಲ ಒಂದು ಸ್ವಾರಸ್ಯವನ್ನು ಹುಟ್ಟಿಸಬಲ್ಲಂಥ ತಾಕತ್ತನ್ನು ಗಳಿಸಿಕೊಂಡಿವೆ.
©2024 Book Brahma Private Limited.