ಐತಿಹಾಸಿಕ ಮತ್ತು ಪೌರಾಣಿಕ ವಸ್ತುಗಳನ್ನು ಆಧರಿಸಿದ ನಾಟಕಗಳ ಮೂಲಕ ಪ್ರಸಿದ್ದರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಅವರ ನಾಟಕ. ಸಾಮಾಜಿಕ ವಸ್ತು ಆಧರಿಸಿದ ನಾಟಕ ಇದು. ಮದುವೆಯ ಆಲ್ಬಮ್ ನಾಟಕಕ್ಕಿಂತ ಮುಂಚೆ ಗಿರೀಶ ಅವರು ‘ಅಂಜು ಮಲ್ಲಿಗೆ’ ಎಂಬ ನಾಟಕ ಪ್ರಕಟಿಸಿದ್ದರು. ಅದು ಸಮುದ್ರದಾಚೆಗೀನ ಕಥೆಯನ್ನು ಒಳಗೊಂಡಿತ್ತು. ಅದಾದ ಮೇಲೆ ಆಧುನಿಕ ತಂತ್ರಜ್ಞಾನ ಬಳಸಿ ಏಕವ್ಯಕ್ತಿ ಪ್ರದರ್ಶನದ ‘ಬಿಂಬ’ ಎಂಬ ನಾಟಕ ಪ್ರಕಟಿಸಿದ್ದರು. ಅದಾದ ಮೇಲೆ ‘ಮದುವೆಯ ಆಲ್ಬಮ್’ ನಾಟಕ ಬರೆದಿದ್ದಾರೆ. ಸಮಕಾಲೀನ ಜೀವನದ ಬಗ್ಗೆ ನಾಟಕ ಬರೆದರೆ ಮಾತ್ರ ಖರೇ ನಾಟಕಕಾರ’ ಎಂದು ಹಿರಿಯ ನಾಟಕಕಾರ- ಪ್ರಕಾಶಕ ಜಿ.ಬಿ. ಜೋಷಿ ಅವರು ಹೇಳಿದ್ದನ್ನು ಪ್ರಸ್ತಾಪಿಸಿರುವ ಗಿರೀಶ ಅವರು ಅದಕ್ಕೆ ಪ್ರತಿವಾದ ಹೂಡಲು ‘ಸಮಕಾಲೀನ ಸಂವೇದನೆ ಮುಖ್ಯ ಹೊರತು ವಿಷಯವಲ್ಲ’ ಎಂದು ಹೇಳಿದ್ದರಂತೆ. ಅದನ್ನು ಸ್ಮರಿಸಿರುವ ಗಿರೀಶ ಅವರು ಜಿ.ಬಿ. ಶತಮಾನೋತ್ಸವ ಸಂದರ್ಭದಲ್ಲಿಯಾದರೂ ‘ಖರೆ ನಾಟಕಕಾರ’ ಎಂದು ಸಿದ್ದಗೊಳಿಸಲು ಅವಕಾಶ ದೊರೆಯಿತಲ್ಲ ಎಂದು ಹೇಳಿದ್ದಾರೆ. ಸಮಕಾಲೀನ ಜೀವನವನ್ನು ಆಧಿರಿಸಿದ ನಾಟಕ ‘ಮದುವೆಯ ಆಲ್ಬಮ್’.
©2024 Book Brahma Private Limited.