ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಡಾ. ಎಂ.ಎಂ. ಕಲಬುರ್ಗಿ ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೇಳಿದ್ದಾರೆ. ಶರಣ ಚಳವಳಿಯ ಅಂತ್ಯದ ಬಗ್ಗೆ ಅನೇಕ ಕೃತಿಗಳು ಬಂದಿವೆಯಾದರೂ ಈ ಕೃತಿ ಮುಖ್ಯವಾಗಿ ನಡೆದಿರಬಹುದಾದ ಒಂದು ಒಳಸಂಚನ್ನು ಪ್ರಸ್ತಾಪಿಸುತ್ತದೆ. ಒಟ್ಟು ನಲವತ್ತು ದೃಶ್ಯಗಳಿರುವ ಅಗ್ರಹಾರ ಸಂಸ್ಕೃತಿ, ದೇಗುಲ ಸಂಸ್ಕೃತಿ ಹಾಗೂ ರಾಜ ಸಂಸ್ಕೃತಿಯನ್ನು ಬಿಚ್ಚಿಡುತ್ತದೆ. ಹಿಂದಿ ಮಲಯಾಳಂ ಭಾಷೆಗಳಿಗೂ ನಾಟಕ ಅನುವಾದಗೊಂಡಿದೆ. ಈವರೆಗೆ ಕನ್ನಡದಲ್ಲಿ ಎರಡು ಮುದ್ರಣಗಳನ್ನು ಕಂಡಿದೆ.
ಕೃತಿಯ ಮಹತ್ವವನ್ನು ಹೇಳುತ್ತಾ ಕಲಬುರ್ಗಿ ಅವರು ’ಈ ನಾಟಕವನ್ನು ಬರೆಯುವಾಗ ರಿಚರ್ಡ ಆಟನ್ ಬರೊ ನಿರ್ದೇಶಿಸಿದ 'ಗಾಂಧೀ' ಚಲನ ಚಿತ್ರ ನನ್ನ ಕಣ್ಣ ಮುಂದಿದೆ, ಈ ನಾಟಕವನ್ನು ಬರೆದವನು ನಾನಾಗಿದ್ದರೂ ಬರೆಸಿಕೊಂಡವನು ನನ್ನೊಳಗಿದ್ದ ಬಸವಣ್ಣ’ ಎಂದಿದ್ದಾರೆ.
©2024 Book Brahma Private Limited.